ಬದಿಯಡ್ಕ: ಸಮಾಜ ತಳಮಟ್ಟದಲ್ಲೇ ಒಗ್ಗಟ್ಟಾದರೆ ಹಿಂದೂ ಸಮಾಜ ಇನ್ನಷ್ಟು ಬಲಿಷ್ಠವಾಗುವುದರಲ್ಲಿ ಸಂದೇಹವಿಲ್ಲ. ಒಗ್ಗಟ್ಟಿನಿಂದ ತಮ್ಮ ಕಾರ್ಯಕ್ಷೇತ್ರಗಳನ್ನು ವ್ಯಾಪಿಸುವಂತೆ ಮಾಡಿ ಸಮಾಜದ ಉನ್ನತಿಗೆ ಕಾರಣವಾಗಬೇಕು. ಈ ನಿಟ್ಡಿನಲ್ಲಿ ಮರಾಟಿ ಸಮಾಜದ ಕಾರ್ಯ ವೈಖರಿ ಶ್ಲಾಘನೀಯ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ನುಡಿದರು.
ಅವರು ಕೇರಳ ಮರಾಟಿ ಸಂರಕ್ಷಣಾ ಸಮಿತಿಯಿಂದ ಕುಂಬ್ಡಾಜೆ ಪಂಚಾಯತಿನ ಪಿಲಾಂಕಟ್ಟೆಯಲ್ಲಿ ನಿರ್ಮಾಣವಾಗಲಿರುವ ಮಹಮ್ಮಾಯಿ ಮಂದಿರ (ಸಮಾಜ ಮಂದಿರ)ಕ್ಕೆ ಶಿಲಾನ್ಯಾಸಗೈದು ಆಶೀರ್ವಚನ ನೀಡಿದರು.
ನಮ್ಮ ಪರಂಪರೆ ಹಾಗೂ ಸಂಸ್ಕøತಿಯ ಸಂರಕ್ಷಣೆಗೆ ಎಲ್ಲರೂ ಒಟ್ಡಾಗಿ ಸಾಗುವುದು ಅತೀ ಅಗತ್ಯ ಎಂದವರು ಹೇಳಿದರು. ಆಧುನಿಕ ಪ್ರಪಂಚದಲ್ಲಿ ಸಂಬಂಧ-ಸಂಪರ್ಕಗಳು ಭಿನ್ನ ಹಾದಿ ಹಿಡಿದಿದೆ. ಆದರೆ ಹಿರಿಯರ ಮಾರ್ಗದರ್ಶನ, ಸತ್ಪಥಗಳ ನಿರ್ವಹಣೆಗೆ ಎಂದಿಗೂ ಚ್ಯುತಿ ಒದಗಬಾರದು ಎಂದು ಶ್ರೀಗಳು ಆಶೀರ್ವಚನವಿತ್ತರು.
ಮರಾಟಿ ಸಂಘದ ರಾಜ್ಯಾಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಕಾಮಗಾರಿ ನಿರ್ವಹಕ ರಾಜೇಶ್ ಮಜೆಕ್ಕಾರರ ಉಪಸ್ಥಿತಿಯಲ್ಲಿ ಶಿಲ್ಪಿ ಸುಕುಮಾರನ್ ಚಾಲಿಂಗಲ್ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ (ಕುಟ್ಟಿ ಹಾಕುವುದು) ನೀಡಿದರು. ಈ ಸಂದರ್ಭದಲ್ಲಿ ಉಬ್ರಂಗಳ ದೇವಸ್ಥಾನದ ಪ್ರತಿನಿಧಿ ಜಯರಾಜ ಕುಣಿಕುಳ್ಳಾಯ, ಮರಾಟಿ ಸಮಾಜದ ಹಿರಿಯರಾದ ಬಾಲಕೃಷ್ಣ ನಾಯ್ಕ್ ಕಯ್ಯಾರ್, ಡಾ.ನಾರಾಯಣ ನಾಯ್ಕ್, ಡಾ.ಜನಾರ್ದನ ನಾಯ್ಕ್, ಕೇರಳ ಕರ್ನಾಟಕ ಮರಾಟಿ ಫೆಡರೇಶನ್ ಅಧ್ಯಕ್ಷರಾದ ಸುಬ್ರಾಯ ನಾಯ್ಕ್ ವಿಶ್ವನಾಥ ಬಿ ಎಸ್, ಲೀಲಾ ರಾಧಾಕೃಷ್ಣನ್, ರಾಜೇಶ್ ಮಜೆಕ್ಕಾರ್, ಪಾತ್ರಿಗಳಾದ ಈಶ್ವರ ನಾಯ್ಕ್ ನೀರೋಳ್ಯ, ಕೃಷ್ಣ ನಾಯ್ಕ್ ನೀರ್ಚಾಲ್, ಮಂಜುನಾಥ ನಾಯ್ಕ್, ಮಹೇಶ್ ಶೃಂಗೇರಿ, ಕಾರ್ಯದರ್ಶಿ ಪುಟ್ಟ ನಾಯ್ಕ್, ಯೂತ್ ವಿಂಗ್ ನ ರಾಧಾಕೃಷ್ಣ ಮಾಸ್ತರ್, ವಿದ್ಯಾರ್ಥಿ ಸಂಘಟನೆಯ ಮಮತೇಶ್ ಕುಂಬ್ಢಾಜೆ, ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಕೃಷ್ಣ ನಾಯ್ಕ್ ಕೃಷ್ಣಪ್ಪ ಮಾಸ್ತರ್ ಅಡೂರು ಬೆಳ್ಳಿಗೆ ಉಪಸ್ಥಿತರಿದ್ದರು. ಕೋಶಾಧಿಕಾರಿ ರಾಧಾಕೃಷ್ಣ ಪೈಕ ಸ್ವಾಗತಿಸಿ, ವಂದಿಸಿದರು. ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.