ಡಲ್ಲಾಸ್: ಸಮಯದ ಬದಲಾವಣೆ ನಮ್ಮ ಕೈಯಲ್ಲಿಲ್ಲ ಎಂಬವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಯುನೈಟೆಡ್ ಸ್ಟೇಟ್ ನಲ್ಲಿ ಗಡಿಯಾರವನ್ನು ನಿನ್ನೆ ರಾತ್ರಿ ಅಂದರೆ ಭಾನುವಾರ ಮುಂಜಾನೆ 2:00 ಗಂಟೆಗೆ ಒಂದು ಗಂಟೆ ಮುಂದಕ್ಕೆ ಸರಿಸಲಾಯಿತು. 2020 ನವೆಂಬರ್ 1 ರಂದು ಸಮಯವನ್ನು ಒಂದು ಗಂಟೆ ಹಿಂದಕ್ಕೆ ನಿಗದಿಪಡಿಸಲಾಗಿತ್ತು.
ಸಮಯದ ಬದಲಾವಣೆಯು ಚಳಿಗಾಲದ ಋತುವಿನ ಅಂತ್ಯಕ್ಕಿಂತ ಒಂದು ಗಂಟೆ ಮುಂದಿರುತ್ತದೆ ಮತ್ತು ಶರತ್ಕಾಲದಲ್ಲಿ ಒಂದು ಗಂಟೆ ಹಿಂದಕ್ಕಿದೆ. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಇಂತಹದೊಂದು ಕ್ರಮ ಜಾರಿಗೆ ತರಲಾಯಿತು.
ಸಾಕಷ್ಟು ಸೂರ್ಯನ ಬೆಳಕು ಇರುವ ವಸಂತ ಋತು, ಚಳಿಗಾಲದಲ್ಲಿ ಹಗಲಿನ ಸಮಯ ದೀರ್ಘವಿರುತ್ತದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ, ವಿದ್ಯುತ್ ಬಳಕೆ ಕಡಿಮೆ ಮಾಡಲು ಮತ್ತು ಯುದ್ಧಭೂಮಿಯಲ್ಲಿ ಹೆಚ್ಚುವರಿ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳುವ ಉದ್ದೇಶದಿಂದ ಸಮಯ ಬದಲಾವಣೆಯನ್ನು ಅಳವಡಿಸಿಕೊಳ್ಳಲಾಗಿದೆ. ಇದನ್ನು ಸ್ಪ್ರಿಂಗ್, ಫಾರ್ವರ್ಡ್ ಮತ್ತು ಫಾಲ್ಬ್ಯಾಕ್ ಎಂದು ಕರೆಯಲಾಗುತ್ತದೆ.
ಅರಿನಾ, ಹವಾಯಿ, ಪೊರ್ಟೊ ರಿಕೊ ಮತ್ತು ವರ್ಜಿನ್ ದ್ವೀಪಗಳಂತಹ ರಾಜ್ಯಗಳಿಗೆ ಸಮಯ ಬದಲಾವಣೆ ಅನ್ವಯಿಸುವುದಿಲ್ಲ.