ಕಾಸರಗೋಡು: ರಾಜ್ಯದಲ್ಲಿ ಈ ಬಾರಿಯೂ ಚುನಾವಣಾ ಕರ್ತವ್ಯದ ಸಿಬ್ಬಂದಿಗೆ ಕುಟುಂಬಶ್ರೀ ವತಿಯಿಂದ ಆಹಾರ ಪೂರೈಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಈ ಹಿಂದೆ ಮತಗಟ್ಟೆಗಳಿಗೆ ಆಗಮಿಸುವ ಸಿಬ್ಬಂದಿಗೆ ಸ್ಥಳೀಯರು ಅಥವಾ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಆಹಾರ ಪೂರೈಕೆ ಮಾಡುತ್ತಿದ್ದರೆ, ಕಳೆದ ಎರಡು ವರ್ಷಗಳಿಂದ ಈ ವ್ಯವಸ್ಥೆಗೆ ಬದಲಾವಣೆ ತಂದುಕೊಳ್ಳಲಾಗಿದೆ.
ಚುನಾವಣೆಯ ಪೂರ್ವಭಾವಿಯಾಗಿ ಕರ್ತವ್ಯದ ಸಿಬ್ಬಂದಿಗೆ ಕೋವಿಡ್ ವಾಕ್ಸಿನೇಷನ್ ಸೌಲಭ್ಯಕ್ಕೆ ಸಜ್ಜೀಕರಣ ಪೂರ್ಣಗೊಂಡಿದೆ. ಮತಗಟ್ಟೆಗಳಲ್ಲಿ ಪುರುಷರು, ಮಹಿಳೆಯರು, ಟ್ರಾನ್ಸ್ ಜೆಂಡರ್ ಮತ್ತು ವಯೋವೃದ್ಧರಿಗೆ ಪ್ರತ್ಯೇಕ ಸಾಲುಗಳಿರಲಿದೆ.
ಚುನಾವಣೆ ಸಂಬಂಧ ಯಾವುದೇ ಸಂಶಯಗಳಿದ್ದಲ್ಲಿ 1950, 04994-255323, 04994-255324, 04994-255325 ಎಂಬ ದೂರವಾಣಿ ಸಂಖ್ಯೆಗಳಿಗೆ ಕರೆಮಾಡಬಹುದು. ರಾಜಕೀಯ ಪಕ್ಷಗಳಿಗೆ ಪ್ರಚಾರಕ್ಕಾಗಿ ಮೈದಾನಗಳನ್ನು ಮಂಜೂರು ಮಾಡುವ ನಿಟ್ಟಿನಲ್ಲಿ ಇ-ಸುವಿದಾ ಪೆÇೀರ್ಟಲ್ ಬಳಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ತಿಳಿಸಿದ್ದಾರೆ.