HEALTH TIPS

ಕೋವಿಶೀಲ್ಡ್, ಕೊವ್ಯಾಕ್ಸಿನ್‌ನಿಂದ ರಕ್ತಹೆಪ್ಪುಗಟ್ಟುವ ಅಪಾಯವಿಲ್ಲ: ಸಮಿತಿ ವರದಿ

          ನವದೆಹಲಿ: ಕೊರೋನ ಸೋಂಕಿನ ವಿರುದ್ಧ ಬಳಸಲು ಯೋಗ್ಯವಾದ ಲಸಿಕೆ ಎಂದು ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ ಪ್ರಮಾಣೀಕರಿಸಿದ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಬಳಕೆಯಿಂದ ರಕ್ತಹೆಪ್ಪುಗಟ್ಟುವ ಅಪಾಯವಿಲ್ಲ ಎಂದು ಕೇಂದ್ರ ಸರಕಾರದ ಉನ್ನತ ಮಟ್ಟದ ಸಮಿತಿ ವರದಿ ನೀಡಿದೆ.


             ಕೆಲವು ಯುರೋಪಿಯನ್ ದೇಶಗಳಲ್ಲಿ ಕೊರೋನ ಸೋಂಕಿನ ವಿರುದ್ಧದ ಔಷಧಿ ಆಸ್ಟ್ರಝೆನೆಕ ಲಸಿಕೆ ಪಡೆದ ಬಳಿಕ ರಕ್ತಹೆಪ್ಪುಗಟ್ಟಿದ ಅನುಭವವಾಗುತ್ತಿದೆ ಎಂಬ ದೂರಿನ ಬಳಿಕ ಈ ಲಸಿಕೆ ಬಳಕೆಗೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಆಸ್ಟ್ರಝೆನೆಕ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಯುರೋಪಿಯನ್ ಔಷಧ ನಿಯಂತ್ರಕರು ಪ್ರಮಾಣೀಕರಿಸಿದ ಬಳಿಕ ಲಸಿಕೆ ನೀಡುವ ಪ್ರಕ್ರಿಯೆ ಮುಂದುವರಿಸಲಾಗಿತ್ತು. ಅಸ್ಟ್ರಝೆನೆಕ ಲಸಿಕೆ ಕೊರೋನ ಸೋಂಕು ತಡೆಗಟ್ಟಲು ಮತ್ತು ಸೋಂಕಿನಿಂದ ಸಾವುಗಳನ್ನು ಕಡಿಮೆ ಮಾಡುವ ಅಪಾರ ಸಾಮರ್ಥ್ಯ ಹೊಂದಿದೆ ಎಂದು ಲಸಿಕೆ ಸುರಕ್ಷತೆಗಾಗಿನ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಲಹಾ ಸಮಿತಿ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿತ್ತು.

           ಭಾರತದಲ್ಲಿ ಲಸಿಕೆ ನೀಡುವ ಪ್ರಕ್ರಿಯೆಯ ಪ್ರಥಮ ಹಂತ ಜನವರಿ 16ರಿಂದ ಆರಂಭವಾಗಿದ್ದು ಆರೋಗ್ಯಕಾರ್ಯಕರ್ತರಿಗೆ ಮತ್ತು ಕೊರೋನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಸಾರ್ವಜನಿಕರಿಗೆ ಲಸಿಕೆ ನೀಡುವ ಪ್ರಕ್ರಿಯೆ ಮಾರ್ಚ್ 1ರಿಂದ ಆರಂಭಗೊಂಡಿದ್ದು ದೇಶದಲ್ಲಿ ಇದುವರೆಗೆ 5 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಜುಲೈಯೊಳಗೆ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ದೇಶದಾದ್ಯಂತ ಲಸಿಕೆ ಅಭಿಯಾನಕ್ಕೆ ಸಂಬಂಧಿಸಿ 400 ಪ್ರಮುಖ ಅಡ್ಡಪರಿಣಾಮ ಅಥವಾ ಪ್ರತಿಕೂಲ ಪರಿಣಾಮಗಳ ಪರಿಶೀಲನೆ ನಡೆಸಿದ್ದು ಇದರಲ್ಲಿ ಅಸಹಜ ರಕ್ತಸ್ರಾವ ಅಥವಾ ರಕ್ತಹೆಪ್ಪುಗಟ್ಟುವ ಸಮಸ್ಯೆ ಇರಲಿಲ್ಲ . ಆದರೂ ಸರಕಾರ ಲಸಿಕೆ ಅಭಿಯಾನ ಹಾಗೂ ಆ ಬಳಿಕದ ಪರಿಸ್ಥಿತಿಗಳ ಬಗ್ಗೆ ನಿಕಟ ಗಮನ ವಹಿಸಿದೆ ಎಂದು 'ಲಸಿಕೆಯ ಬಳಿಕದ ಪ್ರತಿಕೂಲ ಪರಿಣಾಮಗಳ ಕುರಿತ ರಾಷ್ಟ್ರೀಯ ಸಮಿತಿ(ಎಇಎಫ್‌ಐ)' ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries