ತಿರುವನಂತಪುರ: ಚುನಾವಣಾ ಆಯೋಗದ ಅನುಮೋದನೆ ಇಲ್ಲದೆ ಜಿಲ್ಲಾಧಿಕಾರಿಗಳ ಸಭೆ ನಡೆಸಿದ ಸ್ಥಳೀಯಾಡಳಿತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಲ್ಲಿ ಸಬೂಬು ಕೇಳಿ ರಾಜ್ಯ ಚುನಾವಣಾ ಆಯುಕ್ತ ಟೀಕಾರಾಂ ಮೀನ ಆದೇಶ ಹೊರಡಿಸಿದ್ದಾರೆ.
ಈ ವಿಷಯದ ಬಗ್ಗೆ ವಿವರಣೆ ಕೋರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಕ್ಲೀನ್ ಕೇರಳ ಕಂಪನಿಯಿಂದ ತ್ಯಾಜ್ಯ ನಿರ್ವಹಣಾ ಯೋಜನೆಗಳ ಮುಂಜಾಗ್ರತಾ ಕ್ರಮಗಳ ವ್ಯವಸ್ಥೆ ಸಂಬಂಧ ಅವಲೋಕನ ನಡೆಸಲು ಜಿಲ್ಲಾಧಿಕಾರಿಗಳ ಸ|ಭೆ ಕರೆಯಲಾಗಿತ್ತು.
ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಿ ವಿವರಣೆ ಕೋರಲಾಗಿದೆ.