ಕೊನ್ನಿ: ಕೊನ್ನಿ ವಿಧಾನಸಭಾ ಕ್ಷೇತ್ರದ ಎನ್.ಡಿ.ಎ. ಸಮಾವೇಶ ನಿನ್ನೆ ನಡೆಯಿತು. ಕಾರ್ಯಕ್ರಮವನ್ನು ಕರ್ನಾಟಕ ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ ಉದ್ಘಾಟಿಸಿದ್ದು, ಬಿಜೆಪಿ ಮತ್ತು ಎನ್‍ಡಿಎ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಶಬರಿಮಲೆಯ ನಂಬಿಕೆಯನ್ನು ಇಲ್ಲವಾಗಿಸುವ ಪ್ರಯತ್ನವನ್ನು ಬಿಜೆಪಿ ಮತ್ತು ಎನ್‍ಡಿಎ ಘಟಕಗಳು ಬಲವಾಗಿ ವಿರೋಧಿಸಿವೆ ಎಂದು ಅವರು ನೆನಪಿಸಿದರು. ಎಲ್‍ಡಿಎಫ್ ಸರ್ಕಾರವನ್ನು ಉರುಳಿಸಲು ಈ ಬಾರಿ ಕೇರಳದ ಜನರು ಮತ ಚಲಾಯಿಸಬೇಕಾಗಿದೆ. ಎಡ ಚಿಂತನೆ ಕೇರಳದ ಸಂಸ್ಕøತಿಗೆ ಅನುಗುಣವಾಗಿಲ್ಲ ಎಂದೂ ಹೇಳಿದರು.
ಆರ್ಥಿಕ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಪಿಣರಾಯಿ ಸರ್ಕಾರ ಹಿಂದುಳಿದಿದೆ ಎಂದು ಅಶ್ವತ್ ನಾರಾಯಣ ಆರೋಪಿಸಿದರು. ಯುಡಿಎಫ್ ಲೀಗ್ ನಿಂದ ಸಂಪೂರ್ಣವಾಗಿ ನಿಯಂತ್ರಿಸಲ್ಪಡುವ ವ್ಯವಸ್ಥೆಯಾಗಿ ಮಾರ್ಪಟ್ಟಿದೆ ಎಂದು ಅವರು ಗಮನಸೆಳೆದರು.
ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರಕ್ಕೆ ರಾಜಿಯಾಗದ ವಿಧಾನವನ್ನು ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರದ ಸವಲತ್ತುಗಳನ್ನು ನೇರವಾಗಿ ಜನರ ಖಾತೆಗೆ ಭ್ರಷ್ಟತೆಯಾಗದ ರೀತಿಯಲ್ಲಿ ತಲುಪಿಸಲಾಗುತ್ತದೆ. ಆದರೆ ಕೇರಳದಲ್ಲಿ ಎಲ್‍ಡಿಎಫ್ ಮತ್ತು ಯುಡಿಎಫ್ ಭ್ರಷ್ಟಾಚಾರವನ್ನು ಉತ್ತೇಜಿಸುತ್ತಿವೆ. ಕೇರಳದ ಜನರು ಸಂಪೂರ್ಣವಾಗಿ ಭ್ರಷ್ಟಾಚಾರಕ್ಕೆ ವಿರುದ್ಧವಾಗಿದ್ದರೂ, ಈ ಎರಡೂ ರಂಗಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂದು ಅಶ್ವತ್ ನಾರಾಯಣ ಹೇಳಿದ್ದಾರೆ.
ಇಂದು, ಎಲ್ಲಾ ದೇಶಗಳು ಭಾರತವನ್ನು ಬೆಂಬಲಿಸಲು ಮತ್ತು ಸಹಕರಿಸಲು ಮುಂದೆ ಬರುತ್ತಿವೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ದಶಕಗಳ ಆಳ್ವಿಕೆಯ ಹೊರತಾಗಿಯೂ ಇಂತಹ ಬದಲಾವಣೆ ನಡೆದಿಲ್ಲ. ಅವರ ನಾಯಕತ್ವ ಮತ್ತು ಆಡಳಿತ ದುರ್ಬಲವಾಗಿರುವುದೇ ಕಾರಣ ಎಂದು ಅಶ್ವತ್ ನಾರಾಯಣ ಗಮನಸೆಳೆದರು.
ರಕ್ಷಣಾ ವಲಯ ಸೇರಿದಂತೆ ನಮ್ಮ ಎಲ್ಲ ಅಗತ್ಯಗಳಿಗಾಗಿ ನಾವು ಆಮದನ್ನು ಅವಲಂಬಿಸಿದ್ದೇವೆ. ಆದರೆ, ಉತ್ಪಾದನಾ ವಲಯಕ್ಕೆ ಶಕ್ತಿ ತುಂಬಲು ಮತ್ತು ದೇಶದ ಅಗತ್ಯಗಳಿಗೆ ಉತ್ಪನ್ನಗಳನ್ನು ಉತ್ಪಾದಿಸುವ ವ್ಯವಸ್ಥೆಯನ್ನು ಪ್ರಧಾನಿ ಸ್ಥಾಪಿಸಿದ್ದಾರೆ. ಆತ್ಮನಿರ್ಭರ ಭಾರತ್ ಈ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿತ್ತು. ಕೊರೋನಾ ಪರಿಸ್ಥಿತಿಯಲ್ಲೂ ಪ್ರತಿ ದೇಶವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಪ್ರಧಾನ ಮಂತ್ರಿಯ ನೇತೃತ್ವದಲ್ಲಿ ಭಾರತವು ಇತರ ದೇಶಗಳನ್ನೂ ರಕ್ಷಿಸುವ ವಿಧಾನವನ್ನು ಅಳವಡಿಸಿಕೊಂಡಿತ್ತು ಎಂದು ಅವರು ಗಮನಸೆಳೆದರು.