ತಿರುವನಂತಪುರ: ಪ್ಲಸ್ ಟು ಮೂಲ ಅರ್ಹತೆ ಹೊಂದಿರುವ ಹುದ್ದೆಗಳಿಗೆ ಪ್ರಾಥಮಿಕ ಪರೀಕ್ಷೆಯ ದಿನಾಂಕಗಳನ್ನು ಪಿ.ಎಸ್.ಸಿ ಪ್ರಕಟಿಸಿದೆ. ಪರೀಕ್ಷೆಗಳು ಏಪ್ರಿಲ್ 10 ಮತ್ತು 17 ರಂದು ಎರಡು ಹಂತಗಳಲ್ಲಿ ನಡೆಯಲಿದೆ.
ಪರೀಕ್ಷೆ ಮಧ್ಯಾಹ್ನ 1.30 ರಿಂದ 3.15 ರವರೆಗೆ ನಡೆಯಲಿದೆ. ಪರೀಕ್ಷಾ ಕೇಂದ್ರದ ಬಗ್ಗೆ ವಿವರವಾದ ಮಾಹಿತಿ ಹಾಲ್ ಟಿಕೆಟ್‍ನಲ್ಲಿ ಲಭ್ಯವಿದೆ. ಏಪ್ರಿಲ್ 10 ರಂದು ಪರೀಕ್ಷೆಗೆ ಹಾಜರಾಗುವವರು ಮಾರ್ಚ್ 29 ರಿಂದ ಹಾಲ್ ಟಿಕೆಟ್ ಮತ್ತು ಏಪ್ರಿಲ್ 17 ರಂದು ಪರೀಕ್ಷೆಗೆ ಹಾಜರಾಗುವವರು ಏಪ್ರಿಲ್ 8ರಂದು ಡೌನ್‍ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ, https://www.keralapsc.gov.in/ ಗೆ ಭೇಟಿ ನೀಡಿ.