ಕಾಸರಗೋಡು: ವಿಧಾನಸಭಾ ಚುನಾವಣೆ ಅಂಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರಂಭಗೊಂಡ ಮೀಡಿಯಾ ಸರ್ಟಿಫಿಕೇಷನ್ ಆಂಡ್ ಮಾನಿಟರಿಂಗ್ ಸಮಿತಿ (ಎಂ.ಸಿ.ಎಂ.ಸಿ.) ಕೇಂದ್ರವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂಧನ್ ಅವರು ಕೇಂದ್ರದ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಸಹಾಯಕ ಸಂಪಾದಕ ಪಿ.ಪಿ.ವಿನೀಷ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಮುದ್ರಣ, ದೃಶ್ಯ, ಶ್ರವ್ಯ, ಅಂತರ್ಜಾಲ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ಪೇಯ್ಡ್ ನ್ಯೂಸ್, ಅನುಮತಿ ಪಡೆಯದ ಜಾಹೀರಾತು, ಅಭ್ಯರ್ಥಿಯ ವ್ಯಕ್ತಿಗತ ನಿಂದನೆ ಇತ್ಯಾದಿ ಸಂಬಂಧ ವಾರ್ತೆಗಳ, ಜಾಹೀರಾತುಗಳ ಪ್ರಕಟ, ಸಾಮಾಜಿಕಜಾಲತಾಣಗಳ ಪ್ರಕಟಣೆಗಳು ಇತ್ಯಾದಿಗಳ ಬಗ್ಗೆ ಕಣ್ಗಾವಲು ಇರಿಸುವುದು ಈ ಕೇಂದ್ರದ ಪ್ರದಾನ ಚಟುವಟಿಕೆಯಾಗಿವೆ.