ಮಂಜೇಶ್ವರ: ಕುಂಜತ್ತೂರಿನಲ್ಲಿರುವ ಫ್ಲೈ ವುಡ್ ಪ್ಯಾಕ್ಟರಿಯೊಂದರಲ್ಲಿ ಆಕಸ್ಮಿಕ ಬೆಂಕಿ ಆಕಸ್ಮಿಕ ಸಂಭವಿಸಿ ಉಂಟಾದ ಅವಘಡದಲ್ಲಿ ಏಳು ಮಂದಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಮಂಗಳವಾರ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಕಾರ್ಖಾನೆಗೆ ಬೆಂಕಿ ಹತ್ತಿಕೊಂಡಿತು. ಮಂಗಳೂರಿನ ಅಶ್ರಫ್ ಎಂಬವರ ಮಾಲಕತ್ವದಲ್ಲಿರುವ ಎಕ್ಸ್ ಪರೇಟ್ಸ್ ಎಂಬ ಹೆಸರಿನಲ್ಲಿರುವ ಕಾರ್ಖಾನೆಯ ಯಂತ್ರವೊಂದು ಬೆಂಕಿ ಗಾಹುತಿಯಾಗಿದೆ. ಸುರಕ್ಷತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಲು ಕಾರಣವೆಂಬುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಬಿಹಾರ, ಒಡಿಸಾ , ಅಸ್ಸಾಮ್ ನಿವಾಸಿಗಳಾಗಿರುವ ಏಳು ಮಂದಿಗೆ ಬೆಂಕಿಯ ಕೆನ್ನಾಲಿಗೆಗೆ ಒಳಗಾಗಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಬಿಹಾರ ನಿವಾಸಿಗಳಾದ ಧನಂಜಯ್ ಹಾಗೂ ಮನೋಹರ್ ಎಂಬವರ ಸ್ಥಿತಿ ಚಿಂತಾಜನಕವಾಗಿದ್ದು ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಪ್ಪಳ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ಆರಿಸಿತು.