ಕಾಸರಗೋಡು: ಜಾಗೃತರಾದ ನಾಗರೀಕರಿಗೆ ಮಾದರಿ ನೀತಿ ಸಂಹಿತೆ ಆಯೋಗದ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಿವಿಜಿಲ್ ಆಪ್ ಮೊಬೈಲ್ ಅಪ್ಲಿಕೇಷನ್ ಪೂರಕವಾಗಿದೆ.
ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಈ ಆಪ್ ಬಳಸಿ ದೂರು ಸಲ್ಲಿಸಬಹುದು. 100 ನಿಮಿಷಗಳ ಅವಧಿಯಲ್ಲಿ ಈ ಸಂಬಂಧ ಉತ್ತರ ದೊರೆಯಲಿದೆ. ಈ ಆಪ್ ಬಳಸಿ ಪಡೆಯುವ ಚಿತ್ರ/ ವೀಡಿಯೋ ಮಾತ್ರ ಕಳುಹಿಸಬಹುದು. ಯಾವ ಜಾಗದಿಂದ ಚಿತ್ರ/ ವೀಡಿಯೋ ಚಿತ್ರೀಕರಿಸಲಾಗುತ್ತದೋ ಆ ಜಾಗವನ್ನು ಆಪ್ ಪತ್ತೆ ಮಾಡಿ ದಾಖಲಿಸುವ ಮೂಲಕ ಇದು ಡಿಜಿಟಲ್ ಸಾಕ್ಷ್ಯವಾಗುತ್ತದೆ. ಜೊತೆಗೆ ಎಂ.ಸಿ.ಸಿ. ಸ್ಕ್ವಾಡ್ ಯಥಾ ಸಮಯಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.
ಕೆಮರಾ, ಉತ್ತಮ ಇಂಟರ್ ನೆಟ್ ಸಂಪರ್ಕ, ಜಿ.ಪಿ.ಎಸ್. ಸೌಲಭ್ಯವಿರುವ ಯಾವ ಆಂಡ್ರಾಯಿಡ್ ಸ್ಮಾರ್ಟ್ ಫೆÇೀನ್ ನಲ್ಲೂ ಸಿವಿಜಿಲ್ ಇನ್ ಸ್ಟಾಲ್ ನಡೆಸಬಹುದು. ಜಿಲ್ಲಾ ನಿಂತ್ರಣ ಕೊಠಡಿ, ರಿಟನಿರ್ಂಗ್ ಆಫೀಸರ್, ಫ್ಲಯಿಂಗ್ ಸ್ಕಾಡ್, ಸ್ಟಾಟಿಕ್ ಸರ್ವೆಲೆನ್ಸ್ ತಂಡ ಇತ್ಯಾದಿಗಳೊಂದಿಗೆ ನಾಗರೀಕರು ನೇರ ಸಂಪರ್ಕ ಸಾಧಿಸಲು ಸಿವಿಜಿಲ್ ಪೂರಕವಾಗಿದೆ.
ಒಟ್ಟಿನಲ್ಲಿ ಬೇಕಾದುದು ಇಷ್ಟು ಮಾತ್ರ. ಆಪ್ ಬಳಸಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣವನ್ನು 2 ನಿಮಿಷಗಳ ಅವಧಿಯಲ್ಲಿ ಚಿತ್ರೀಕರಿಸಿ, ಅದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಸಹಿತ ದೂರು ದಾಖಲಿಸಬೇಕು. ಫೆÇೀಟೋ/ ವೀಡಿಯೋ ಮೂಲಕ ಭೌಗೋಳಿಕ ಮಾಹಿತಿ ಸ್ವಯಂ ಆಗಿ ದಾಖಲುಗೊಳ್ಳುವ ಹಿನ್ನೆಲೆಯಲ್ಲಿ ಅದು ಜಿಲ್ಲಾ ನಿಯಂತ್ರಣ ಕೊಠಡಿಗೆ ನೇರವಾಗಿ ಸಲ್ಲಿಕೆಯಾಗುತ್ತದೆ. ಈ ಮೂಲಕ ಫ್ಲಯಿಂಗ್ ಸ್ಕ್ವಾಡ್ ನಿಮಿಷಗಳ ಅವಧಿಯಲ್ಲಿ ಜಾಗಕ್ಕೆ ತಲಪಲು ಸಾಧ್ಯವಾಗುತ್ತದೆ.
ದೂರವಾಣಿ ಸಂಖ್ಯೆ ನೀಡಿ ಒ.ಟಿ.ಪಿ. ಮತ್ತು ವ್ಯಕ್ತಿಗಳ ಬಗೆಗಿನ ಮಾಹಿತಿ ನೀಡಿ ದೂರುದಾತ ಮುಂದಿನ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ದೂರುದಾತ ಬೇಕಿದ್ದರೆ ಗುಪ್ತವಾಗಿ ದೂರು ದಾಖಲಿಸುವ ವ್ಯವಸ್ಥೇಯೂ ಇಲ್ಲಿದೆ. ಆದರೆ ಈ ವ್ಯವಸ್ಥೆಯಲ್ಲಿ ದೂರಿನ ಮುಂದಿನ ಕ್ರಮಗಳ ಬಗ್ಗೆ ಮಾಹಿತಿ ದೊರೆಯಲಾರದು. ರಿಟನಿರ್ಂಗ್ ಅಧಕಾರಿಯನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ದೂರು ಲಭಿಸಿದರೆ ಅದನ್ನು ಫೀಲಡ್ ಯೂನಿಟ್ ಗೆ ಹಸ್ತಾಂತರಿಸಲಾಗುವುದು. ಫೀಲ್ಡ್ ಯೂನಿಟ್ ನಲ್ಲಿ ಫ್ಲಯಿಂಗ್ ಸ್ಕಾಡ್ಗಳು, ಸ್ಟಾಟಿಕ್ ಸರ್ವೆಲೆನ್ಸ್ ಟೀಮ ಗಳು ಇತ್ಯಾದಿಗಳಿರುವುವು. ಫೀಲ್ಡ್ ಯೂನಿಟ್ ಗೆ ಅವರು ಬಳಸುವ ಸಿವಿಜಿಲ್ ಇನ್ವೆಸ್ಟಿಗೇಟರ್ ಎಂಬ ಮೊಬೈಲ್ ಅಪ್ಲಿಕೇಷನ್ ಮೂಲಕ ದೂರುಗಳ ಮೂಲ ಟ್ರಾಕ್ ನಡೆಸಿ ನೇರವಾಗಿ ತಲಪಲು ಸಾಧ್ಯವಾಗಲಿದೆ. ಪೀಲ್ಡ್ ಯೂನಿಟ್ ಜಾಗಕ್ಕೆ ತಲಪಿ ಕ್ರಮ ಕೈಗೊಂಡ ನಂತರ ಮುಂದಿನ ಕ್ರಮಗಳ, ತೀರ್ಪಿನ ಬಗ್ಗೆ ಇನ್ವೆಸ್ಟಿಗೇಟರ್ ಆಪ್ ಮೂಲಕ ರಿಟನಿರ್ಂಗ್ ಆಫೀಸರ್ ಗೆ ಫೀಲ್ಡ್ರಿಪೆÇೀರ್ಟ್ ಸಲ್ಲಿಸಲಾಗುವುದು. ಘಟನೆಯ ನಿಜಸ್ಥಿತಿ ಪತ್ತೆಯಾದಲ್ಲಿ ಮಾಹಿತಿಗಳನ್ನು ಕೇಂದ್ರ ಚುನಾವಣೆ ಆಯೋಗದ ನ್ಯಾಷನಲ್ ಗ್ರಿವೆನ್ಸ್ ಪೆÇೀರ್ಟಲ್ ಗೆ ಕಳುಹಿಸಲಾಗುವುದು. 100 ನಿಮಿಷಗಳ ಅವಧಿಯಲ್ಲಿ ಮಾಹಿತಿ ನೀಡಲಾಗುವುದು. ಅಗತ್ಯವಿದ್ದರೆ ದೂರನ್ನು ರ್ದುಗೊಳಿಸುವ ಸೌಲಭ್ಯವೂ ಈ ಆಪ್ ನಲ್ಲಿದೆ. ಚುನಾವಣೆ ನಡೆಯುವ ರಾಜ್ಯದ ಭೂವಿಜ್ಞಾನ ಗಡಿಗಳಲ್ಲಿ ಮಾತ್ರ ಈ ಆಪ್ ಬಳಕೆ ಸಾಧ್ಯ. ಸಿವಿಜಿಲ್ಫೊಟೋ/ ವೀಡಿಯೋ ಚಿತ್ರೀರಿಸಿದ ನಂತರ ಅಪ್ ಲೋಡ್ ಮಾಡಲು ಕೇವಲ 5 ನಿಮಿಷಗಳ ಅವಧಿ ಲಭಿಸಲಿದೆ. ಹಿಂದೆಯೇ ಚಿತ್ರೀಕರಿಸಿದ ಫೆÇಟೋ/ ವೀಡಿಯೋ ಆಪ್ ನಲ್ಲಿ ಅಪ್ ಲೋಡ್ ನಡೆಸಲಾಗದು. ಆಪ್ ನಲ್ಲಿ ಚಿತ್ರೀರಿಸಲಾದ ಫೆÇಟೋ/ವೀಡಿಯೋ ಫೆÇನ್ ಗ್ಯಾಲರಿಯಲ್ಲಿ ನೇರವಾಗಿ ಸೇವ್ ನಡೆಸಲೂ ಸಾಧ್ಯವಿಲ್ಲ. ಸತತವಾಗಿ ಒಂದೇ ಪ್ರದೇಶದಿಂದ ದೂರುಗಳನ್ನು ಸಲ್ಲಿಸುವುದನ್ನು ತಪ್ಪಿಸಲೂ ಇಲ್ಲಿ ವ್ಯವಸ್ಥೆಗಳಿವೆ. ಒಬ್ಬರು ದೂರು ಸಲ್ಲಿಸಿ 15 ನಿಮಿಷಗಳ ನಂತರವಷ್ಟೆ ಮುಂದಿನ ದೂರು ಸಲ್ಲಿಸಬಹುದು. ಲಭಿಸುವ ದೂರುಗಳು ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧ ಪಡದೇ ಇದ್ದಲ್ಲಿ, ವ್ಯಕ್ತಿಗತ ಯಾ ಪುನರಾವರ್ತನೆಯಾಗಿದ್ದಲ್ಲಿ ದೂರನ್ನು ತಿರಸ್ಕರಿಸಲು ಜಿಲ್ಲಾ ನಿಯಂತ್ರಣ ಕೊಠಡಿಗೆ ಅಧಿಕಾರವಿದೆ.
ಗೂಗಲ್ ಪ್ಲೇ ಸ್ಟೋರ್ ನಲ್ಲಿ cV-IGIL ಎಂದು ಸರ್ಚ್ ನೀಡಿದರೆ ಸಿವಿಜಿಲ್ ಆಪ್ ಲಭಿಸಲಿದೆ.