ತಿರುವನಂತಪುರ: ಕೋವಿಡ್ ಲಸಿಕೆಯ ಎರಡು ಪ್ರಮಾಣವನ್ನು ಸ್ವೀಕರಿಸಿದ ಬಳಿಕ, ವಿದೇಶದಿಂದ ಊರಿಗೆ ಮರಳಿದ ನಂತರವೂ ಕ್ಯಾರೆಂಟೈನ್ ವಿಧಿಸಲಾಗುತ್ತಿದೆ ಎಂಬ ಆರೋಪ ಬಲಗೊಳ್ಳುತ್ತಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಕೊಲ್ಲಿ ರಾಷ್ಟ್ರಗಳ ವಲಸಿಗರು ಈ ಆರೋಪಗಳನ್ನು ಮಾಡಿದ್ದಾರೆ.
ಎರಡು ಡೋಸ್ ಲಸಿಕೆ ತೆಗೆದುಕೊಂಡ ಬ:ಳಿಕವೂ ಕ್ಯಾರೆಂಟೈನ್ ನ್ನು ಏಕೆ ಅನ್ವಯಿಸಲಾಗುತ್ತದೆ ಎಂದು ಅವರು ಕೇಳುತ್ತಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಪಿ.ಸಿ.ಆರ್ ಪರೀಕ್ಷೆಯ ನಂತರವೇ ಅವರು ಸ್ವದೇಶಕ್ಕೆ ಆಗಮಿಸುತ್ತಾರೆ. ಜೊತೆಗೆ ಅವರು ರೋಗದಿಂದ ಮುಕ್ತರು ಎಂಬುದೂ ಅಲ್ಲಿ ವೇದ್ಯವಾಗುತ್ತದೆ.
ಬಹುತೇಕರು ಅಲ್ಪಾವಧಿಯ ರಜೆಯೊಂದಿಗೆ ಮನೆಗೆ ಮರಳಿದಾಗ ಸಂಪರ್ಕತಡೆಯನ್ನು ಹೇರುವುದು ಪ್ರತಿಕೂಲ ಪರಿಣಾಮ ಬೀರುತ್ತದೆ. ಲಸಿಕೆ ಪಡೆದ ನಂತರ ಮನೆಗೆ ಮರಳುವವರ ಸಂಪರ್ಕತಡೆಯನ್ನು ಇಲ್ಲವಾಗಿಸಬೇಕು ಎಂದು ಒತ್ತಾಯಿಸಲಾಗಿದೆ.