HEALTH TIPS

ಒಡಿಯೂರು ಶ್ರೀಗಳ ಷಷ್ಟ್ಯಬ್ದ ಸಂಭ್ರಮ-ತೃತೀಯ ಸರಣಿ ಕಾರ್ಯಕ್ರಮ:ಬಯಲು ರಂಗ ಮಂಟಪ ಉದ್ಘಾಟನೆ

       

       ಕಾಸರಗೋಡು: ಇಂದಿನ ತಂತ್ರಜ್ಞಾನ ಮಾಹಿತಿ ಸ್ಪೋಟದ ಯುಗದ ಈಗ ಎಲ್ಲರಿಗೂ ಕೈ ಬೆರಳ ತುದಿಯಲ್ಲಿ ಏನು ಮಾಹಿತಿ ಬೇಕಿದ್ದರೂ ತತ್‍ಕ್ಷಣ ಸಿಗುತ್ತೆ. ಎಲ್ಲರೂ ಸರ್ವಜ್ಞಾನಿಗಳೆ ಅಂದರೆ ಅಲ್ಲ. ಏಕೆಂದರೆ ಮಾಹಿತಿ ಬೇರೆ ಜ್ಞಾನ ಬೇರೆ. ಮಾಹಿತಿಯನ್ನು ಅರಗಿಸಿಕೊಂಡು ಅದನ್ನು ಜೀವನದಲ್ಲಿ ಸಮರ್ಥವಾಗಿ ಅಳವಡಿಸಿಕೊಂಡು ಸಮಾಜದ ಸಮಷ್ಟಿ ಹಿತಕ್ಕೆ ಬಳಸಿಕೊಂಡರೆ ಸರಿ. ಇಲ್ಲವಾದರೆ ನಾವೊಂದು ರೋಬೋಟ್ ತರಹ ಎಂದು ಡಾ.ವರದರಾಜ ಚಂದ್ರಗಿರಿ ಅವರು ಹೇಳಿದರು. 

              ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ಪರಮಪೂಜ್ಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಗಳವರ ಷಷ್ಟ್ಯಬ್ದ ಸಂಭ್ರಮ - 2021 ಜ್ಞಾನವಾಹಿನಿ ಕಾಸರಗೋಡು ವಲಯ ಸಮಿತಿ ಇದರ ತೃತೀಯ ಸರಣಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

       ಸಾಲು ಮರದ ತಿಮ್ಮಕ್ಕ ಗಿಡ ನೆಡುವಾಗ ಅದರ ಪರಿಣಾಮ ಅವಳು ತಿಳಿದು ಕೊಂಡೆ ನಟ್ಟಿದ್ದಳು. ಅದೆಂದರೆ ಮರವಾದ ಬಳಿಕ  ಆ ಗಿಡ ನೆರಳು ನೀಡುವುದು, ಪಕ್ಷಿ ಸಂಕುಲಕ್ಕೆ ಮನೆಯಾಗಿ ಆಸರೆ ನೀಡುವುದು, ಹಣ್ಣು ಹಂಪಲು ನೀಡಿ ಸಾರ್ವಜನಿಕರ ಹೊಟ್ಟೆ ತಣ್ಣಗಾಗಿಸುವ ಪರಿ. ಇವೆಲ್ಲವೂ ಆ ಅಕ್ಷರ ಕಲಿಯದ ಜ್ಞಾನಿಯಲ್ಲಿ ಅಡಕವಾದ ವಿವೇಕ. ಹಾಗಿದ್ದರೆ ಮಾಹಿತಿ ಅಂದರೆ ಜ್ಞಾನ ಅಲ್ಲ. ಜ್ಞಾನ ಮುಂದೆ ವಿವೇಕ ಆದರೆ ಮಾತ್ರ ಸಾರ್ಥಕ. ವಿವೇಕ ಉಂಟಾದರೆ ಎಲ್ಲವೂ ಜಗತ್ತನ್ನು ಒಳಿತು ಮಾಡಲು ಪೂರಕ. ಆದ ಕಾರಣ ಮಾಹಿತಿಯನ್ನು ಅರಗಿಸಿ ಜ್ಞಾನವನ್ನಾಗಿ ಮಾಡಿ, ಮುಂದೆ ವಿವೇಕತೆಯಿಂದ ವರ್ತಿಸಿದರೆ ಲೋಕ ಕಲ್ಯಾಣ ಆದೀತು. ವಿವೇಕಾನಂದರು ಸುಮ್ಮನೆ ಆ ಹೆಸರು ಪಡೆದವರಲ್ಲ. ನಾವೆಲ್ಲ ವಿವೇಕಾನಂದರಾಗಬೇಕಾದರೆ ಈ ಮೂರು ಹಂತವನ್ನೇರಬೇಕು ಎಂದರು. 

      ಕನ್ನಡ ಭವನದ ಬಯಲು ರಂಗಮಂಟಪದ ಉದ್ಘಾಟನೆಯನ್ನು ಪರಮಪೂಜ್ಯ ಸಾದ್ವಿ ಶ್ರೀ ಮಾತಾನಂದಮಯಿ ದೀಪ ಬೆಳಗಿಸಿ ನೆರವೇರಿಸಿ ಆಶೀರ್ವಚನವಿತ್ತರು. ಇದೇ ಸಂದರ್ಭದಲ್ಲಿ ಡಾ.ಉಪ್ಪಂಗಳ ಶಂಕರನಾರಾಯಣ ಭಟ್ ಅವರ ಕಾಸರಗೋಡು ಪರಿಸರದ ಸಂಸ್ಕøತ ಕನ್ನಡ ನಾಟಕ ರಚಕರು ಕೃತಿ ಬಿಡುಗಡೆ ಗೊಳಿಸಿದರು.  

ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ, ಡಾ|ಅನುರಾಧ ಕುರುಂಜಿ ಭಾಗವಹಿಸಿದರು. ಕಾಸರಗೋಡು ವಲಯ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ, ಕಾರ್ಯಾಧ್ಯಕ್ಷ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಉಪಸ್ಥಿತರಿದ್ದರು.  

         ಕನ್ನಡ ಭವನ ಸಂಸ್ಥಾಪಕ ಕೆ.ವಾಮನ್ ರಾವ್ ಬೇಕಲ ಸ್ವಾಗತಿಸಿದರು. ಕಾಸರಗೋಡು ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವರಾಮ ಕಾಸರಗೋಡು ಪ್ರಾಸ್ತಾವಿಕ ನುಡಿದರು. ಸಂಘಟನಾ ಕಾರ್ಯದರ್ಶಿ ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ಕೆ.ಗುರುಪ್ರಸಾದ್ ಕೋಟೆಕಣಿ ವಂದಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ವಿವಿಧ ಭಜನಾ ಮಂಡಳಿಗಳಿಂದ ಸಂಕೀರ್ತನಾ ಸಂಭ್ರಮ ನಡೆಯಿತು. 


            

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries