ಬದಿಯಡ್ಕ: ನೀರ್ಚಾಲು ಮಾಡತ್ತಡ್ಕ ಶ್ರೀ ದೈವಗಳ ಸೇವಾಸಮಿತಿ ಹಾಗೂ ಶ್ರೀ ಹರಿಹರ ಭಜನಾ ಮಂದಿರದ ವಾರ್ಷಿಕೋತ್ಸವವು ಮಂಗಳವಾರ ದಂದು ಬೆಳಗ್ಗೆ ಗಣಪತಿ ಹೋಮದೊಂದಿಗೆ ಪ್ರಾರಂಭವಾಯಿತು. ಹಿರಿಯರಾದ ಗೋವಿಂದ ಭಟ್ ಮಿಂಚಿನಡ್ಕ ದೀಪ ಬೆಳಗಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ವಿಷ್ಣು ಶರ್ಮ ಅಣಬೈಲು ಗಣಪತಿ ಹೋಮ, ವೇದಮೂರ್ತಿ ಶಿವಶಂಕರ ಭಟ್ ಪಾಂಡೇಲು ಅವರು ಶ್ರೀ ಶಂಕರನಾರಾಯಣ ಕಲ್ಪೋಕ್ತ ಪೂಜೆ ನೆರವೇರಿಸಿದರು. ಹರಿಹರ ಭಜನ ಸಂಘ ಮಾಡತ್ತಡ್ಕ, ಹರಿಶ್ರೀ ಬಾಲಗೋಕುಲ ಕುಂಟಿಕಾನ, ಹರಿಪ್ರಸಾದ್ ಬೆಳ್ಳೂರು ಮತ್ತು ಬಳಗದವರಿಂದ ಭಜನೆ, ಮಧ್ಯಾಹ್ನ ಮಹಾಮಂಗಳಾರತಿ, ಭೋಜನ ಪ್ರಸಾದ, ಅಪರಾಹ್ನ ಶ್ರೀ ದೈವಗಳಿಗೆ ತಂಬಿಲ, ಪ್ರಸಾದ ವಿತರಣೆ ನಡೆಯಿತು.