ತಿರುವನಂತಪುರ: ಕೇರಳದಲ್ಲಿ ಗೋಮಾಂಸ ನಿಷೇಧವನ್ನು ಬಿಜೆಪಿ ಒತ್ತಾಯಿಸುವುದಿಲ್ಲ ಎಂದು ಎನ್‍ಡಿಎ ಅಭ್ಯರ್ಥಿ ಮತ್ತು ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಹೇಳಿದ್ದಾರೆ. "ಇಲ್ಲಿರುವ ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ತಿನ್ನಲು ಮುಕ್ತರಾಗಿದ್ದಾರೆ" ಎಂದು ಕುಮ್ಮನ್ ಹೇಳಿದರು.
ನಾವು ಕೇರಳದಲ್ಲಿ ಗೋಮಾಂಸ ನಿಷೇಧಕ್ಕೆ ಒತ್ತಾಯಿಸುವುದಿಲ್ಲ. ಇಲ್ಲಿರುವ ಪ್ರತಿಯೊಬ್ಬರೂ ಅವರು ಇಷ್ಟಪಟ್ಟಂತೆ ತಿನ್ನಲು ಮುಕ್ತರಾಗಿದ್ದಾರೆ ಎಂದು ಕುಮ್ಮನಂ ರಾಜಶೇಖರನ್ ಹೇಳಿದರು.
ಇದೇ ವೇಳೆ ಕೇರಳದ ಜೊತೆಗೆ ಚುನಾವಣೆ ನಡೆಯುತ್ತಿರುವ ಇತರ ರಾಜ್ಯಗಳಲ್ಲಿ ಗೋವಧೆ ನಿಷೇಧ ಬಿಜೆಪಿಯ ಪ್ರಣಾಳಿಕೆಯಲ್ಲಿ ಪ್ರಮುಖ ಭರವಸೆಯಾಗಿದೆ. ತಮಿಳುನಾಡಿನಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಮುಖ ವಾಗ್ದಾನವಾಗಿ ಗೋಹತ್ಯೆ ನಿಷೇಧವನ್ನು ಉಲ್ಲೇಖಿಸಿದೆ.