HEALTH TIPS

"ಈ ವೇಗದಲ್ಲಿ ಎಲ್ಲರಿಗೂ ಲಸಿಕೆ ನೀಡಲು ಹಲವು ವರ್ಷಗಳೇ ಹಿಡಿಯಲಿವೆ"!

          ನವದೆಹಲಿ : ಭಾರತದಲ್ಲಿ ಕರೊನಾ ಲಸಿಕಾ ಅಭಿಯಾನ ನಡೆಯುತ್ತಿರುವ ವೇಗದ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿಯೊಂದು ಕಳವಳ ವ್ಯಕ್ತಪಡಿಸಿದೆ. ಈ ವೇಗದಲ್ಲೇ ಲಸಿಕೆ ನೀಡುವ ಪ್ರಕ್ರಿಯೆ ಮುಂದುವರಿದಲ್ಲಿ, ಇಡೀ ದೇಶದ ಜನರಿಗೆ ಲಸಿಕೆ ನೀಡಲು ಹಲವು ವರ್ಷಗಳೇ ಬೇಕಾಗುತ್ತವೆ ಎಂದು ಸಮಿತಿ ಹೇಳಿದೆ.


       ಗೃಹ ವ್ಯವಹಾರಗಳ ಸ್ಥಾಯಿ ಸಮಿತಿ (ಸ್ಟಾಂಡಿಂಗ್ ಕಮಿಟಿ ಆನ್ ಹೋಂ ಅಫೇರ್ಸ್) ಇಂದು ಸಂಸತ್ತಿನಲ್ಲಿ ಗೃಹ ಸಚಿವಾಲಯದ ಅನುದಾನದ ಬೇಡಿಕೆಗಳ ಬಗ್ಗೆ ಸಲ್ಲಿಸಿದ ವರದಿಯಲ್ಲಿ, ಲಸಿಕೆ ಪಡೆಯಲು ಮುಂದೆ ಬರುತ್ತಿರುವ ಹೆಚ್ಚಿನ ಜನರು ಎರಡನೇ ಡೋಸ್ ಪಡೆಯದಿರುವುದರ ಬಗ್ಗೆಯೂ ಆತಂಕ ವ್ಯಕ್ತಪಡಿಸಿದೆ.

         ಈವರೆಗೆ ಭಾರತದ ಜನಸಂಖ್ಯೆಯ ಶೇ.1 ರಷ್ಟಕ್ಕೂ ಕಡಿಮೆ ಜನರು ಲಸಿಕೆ ನೀಡಲ್ಪಟ್ಟಿದ್ದು, 'ಈ ದರದಲ್ಲಿ, ಇಡೀ ಜನಸಂಖ್ಯೆಗೆ ಲಸಿಕೆ ನೀಡಲು ಹಲವು ವರ್ಷಗಳೇ ಹಿಡಿಯಲಿವೆ' ಎಂದಿರುವ ಸಮಿತಿಯು, ಆದಷ್ಟು ಬೇಗ ಗರಿಷ್ಠ ಸಂಖ್ಯೆಯ ಜನರನ್ನು ಲಸಿಕೆಗೆ ಒಳಪಡಿಸಲು ಪ್ರಯತ್ನ ನಡೆಯಬೇಕು ಎಂದಿದೆ.

'ವೈರಸ್ ರೂಪಾಂತರಗೊಳ್ಳುತ್ತಲೇ ಇರುವುದು ವಿಶ್ವದ ವಿವಿಧ ಭಾಗಗಳಿಂದ ವರದಿಯಾಗುತ್ತಿರುವ ಈ ಸಂದರ್ಭದಲ್ಲಿ, ಇದು ಬಹಳ ಗಂಭೀರವಾದ ವಿಷಯ. ಪಾರಾಮಿಲಿಟರಿ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಸೇರಿದಂತೆ ಎಲ್ಲಾ ಮುಂಚೂಣಿ ಕಾರ್ಯಕರ್ತರು ಮತ್ತು ಕರೊನಾ ವಾರಿಯರ್​​ಗಳು ನಿಗದಿಪಡಿಸಲಾಗಿರುವ ಎರಡೂ ಡೋಸ್​ಗಳನ್ನು ಪಡೆಯಬೇಕು' ಎಂದೂ ಸಮಿತಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries