HEALTH TIPS

ಗುಜರಾತ್‌ನ ಸಬರಮತಿ ಆಶ್ರಮದಲ್ಲಿ ಪ್ರಧಾನಿ ಮೋದಿ 'ಸ್ವಾತಂತ್ರ್ಯದ ಅಮೃತ ಮಹೋತ್ಸವ'ಕ್ಕೆ ಚಾಲನೆ, ದಂಡಿ ಮೆರವಣಿಗೆ

         ಅಹಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಗುಜರಾತ್‌ನ ಅಹಮದಾಬಾದ್ ನಲ್ಲಿರುವ ಸಬರ್ಮತಿ ಆಶ್ರಮದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಚಟುವಟಿಕೆಗಳಿಗೆ ಚಾಲನೆ ನೀಡಿದರು.


      ಇಂದು ಬೆಳಗ್ಗೆ ಸಬರ್ಮತಿ ಆಶ್ರಮಕ್ಕೆ ಬಂದ ಅವರು ಮಹಾತ್ಮಾ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ನಂತರ ಸಬರ್ಮತಿ ಆಶ್ರಮದ ಹೃದಯ ಕುಂಜ್ ನಲ್ಲಿ ಮಹಾತ್ಮಾ ಗಾಂಧಿ ಭಾವಚಿತ್ರವನ್ನು ಅನಾವರಣಗೊಳಿಸಿದರು.

      ದೇಶಕ್ಕೆ ಸ್ವಾತಂತ್ರ್ಯ ಬಂದು 2022ರ ಆಗಸ್ಟ್ 15ಕ್ಕೆ 75ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಜನ-ಭಾಗಿದಾರಿ ಹಾಗೂ ಜನ-ಉತ್ಸವದ 75 ವಾರಗಳ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಿದ್ದಾರೆ. ಮಹಾತ್ಮಾ ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ಆರಂಭವಾಗಿ ಇಂದಿಗೆ 91 ವರ್ಷವಾದ ಹಿನ್ನೆಲೆಯಲ್ಲಿ ಸಬರ್ಮತಿ ಆಶ್ರಮದಿಂದ ದಂಡಿಗೆ ಮೆರವಣಿಗೆ ಸಾಗಲಿದ್ದು ಅದಕ್ಕೆ ಸಹ ಇಂದು ಪ್ರಧಾನಿ ಚಾಲನೆ ನೀಡಲಿದ್ದಾರೆ. 

     ಅಮೃತ ಮಹೋತ್ಸವದ ಅಂಗವಾಗಿ ಅಹಮದಾಬಾದ್ ನ ಅಭಯ್ ಘಾಟ್ ಹತ್ತಿರ ಏರ್ಪಡಿಸಲಾಗಿರುವ ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ ಮೋದಿ ಛಾಯಾಚಿತ್ರಗಳು, ಮ್ಯಾಗಜಿನ್ ಗಳು ಮತ್ತು ಇತರ ಸಂಗ್ರಹಗಳನ್ನು ಕೂಡ ವೀಕ್ಷಿಸಿದರು. 

      ಇದಕ್ಕೂ ಮುನ್ನ ದೇಶವಾಸಿಗಳಿಗೆ ಕರೆ ನೀಡಿರುವ ಪ್ರಧಾನಿ ಸ್ಥಳೀಯ ವಸ್ತುಗಳನ್ನು ಖರೀದಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿ ಸ್ಥಳೀಯತೆಗೆ ಆದ್ಯತೆ ನೀಡಿ ಎಂದು ಒತ್ತಾಯಿಸಿ, ಸಬರ್ಮತಿ ಆಶ್ರಮದ ಮಗನ್ ನಿವಾಸ್ ಬಳಿ ಚಕ್ರ ಸ್ಥಾಪಿಸಲಾಗಿದ್ದು ಆತ್ಮನಿರ್ಭರಕ್ಕೆ ಸಂಬಂಧಿಸಿದ ಪ್ರತಿ ಟ್ವೀಟ್‌ನೊಂದಿಗೆ ಇದು ಪೂರ್ಣ ವಲಯವನ್ನು ಸುತ್ತುತ್ತದೆ. ಇದು ಜನರ ಚಳವಳಿಗೆ ಉತ್ತೇಜನ ನೀಡಲಿದೆ ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries