ಮುಳ್ಳೇರಿಯ: ಬೆಳ್ಳೂರು ಸಮೀಪದ ಕಾಯಿಮಲೆಯಲ್ಲಿ ಕುಡಿಯುವ ನೀರಿನ ಸೌಕರ್ಯದ ಉದ್ಘಾಟನೆ ನೆರವೇರಿತು.
ಹಲವು ದಶಕಗಳಿಂದ ಕಾಯಿಮಲೆ ಪರಿಸರ ಪ್ರದೇಶದ ಜನರು ಶುದ್ದ ಕುಡಿಯುವ ನೀರಿನ ಅಲಭ್ಯತೆಯಿಂದ ಸಂಕಷ್ಟ ಅನುಭವಿಸುತ್ತಿದ್ದರು. ಇಲ್ಲಿ 18 ಪ.ಜಾತಿ ಹಾಗೂ ಮೂರು ಸಾಮಾನ್ಯ ವರ್ಗದ ಕುಟುಂಬಗಳು ವಾಸಿಸುತ್ತಿದ್ದು, ಅನತಿ ಸದೂರದ ಸಾರ್ವಜನಿಕ ಬಾವಿಯನ್ನು ಅವಲಂಬಿಸಿದ್ದರು. ಗ್ರಾ.ಪಂ. ವ್ಯಾಪ್ತಿಯ ಹಲವೆಡೆ ಈಗಾಗಲೇ ಕುಡಿಯುವ ನೀರಿನ ಸೌಕರ್ಯಗಳನ್ನು ಏರ್ಪಡಿಸಿದ್ದರೂ ಈವರೆಗೆ ಕಾಯಿಮಲೆ ನೀರಿನಿಂದ ವಂಚಿತವಾಗಿತ್ತು. ಈ ಬಗ್ಗೆ ಸ್ಥಳೀಯ ಯುಡಿಎಫ್ ಕಾರ್ಯಕರ್ತರಿಗೆ ಇತ್ತೀಚೆಗೆ ತಮ್ಮ ಸಂಕಷ್ಟದ ಬಗ್ಗೆ ತಿಳಿಸಿದಾಗ ಸಂಕಷ್ಟಕ್ಕೆ ಸ್ಪಂದಿಸಿದ ಯುಡಿಎಫ್ ಕಾರ್ಯಕರ್ತರು ಕೊಳವೆ ಬಾವಿ ಮತ್ತು ಪೈಪ್ ಗಳನ್ನು ಜೋಡಿಸಿದರು.
ಮೋಹನಕೃಷ್ಣ ಬಲ್ಲಾಳ್ ಅಡ್ವಳ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಬ್ದುಲ್ಲ ಅಲಾಬಿ ಉದ್ಘಾಟಿಸಿದರು. ಯುಡಿಎಫ್ ಕಾರ್ಯಕರ್ತರಾದ ಅಬ್ದುಲ್ ರಹಿಮಾನ್ ಗಂಡಿತ್ತಡ್ಕ, ಸಿದ್ದೀಕ್ ಕರ್ಕಡಗೋಳು, ಮುಸ್ತಫ ನೆಲ್ಲಿತ್ತಡ್ಕ, ಮಂಜುನಾಥ ರೈ ಮಿತ್ತಜಾಲು, ಕೃಷ್ಣ ಮಣಿಯಾಣಿ ಬೆಳೇರಿ, ರಾಘವ ಬೆಳೇರಿ, ನೂರುದ್ದೀನ್ ಬೆಳಿಂಜ, ಅಬೂಬಕರ್ ನೆಲ್ಲಿತ್ತಡ್ಕ, ಹನೀಫ ನೆಲ್ಲಿತ್ತಡ್ಕ ಉಪಸ್ಥಿತರಿದ್ದರು. ಬಾಬು, ಪ್ರಜ್ವಲ್, ಅಶೋಕ್, ಅಡ್ರು ಯುಡಿಎಫ್ ಕಾರ್ಯಕರ್ತರನ್ನು ಈ ಸಂದರ್ಭ ಅಭಿನಂದಿಸಿ ಗೌರವಿಸಿದರು. ಕುಸುಮ ಸ್ವಾಗತಿಸಿ, ಸುಂದರ ಕಾಯಿಮಲೆ ವಂದಿಸಿದರು.