ಕಾಸರಗೋಡು: ವಿಧಾನಸಭೆ ಕ್ಷೇತ್ರ ಚುನಾವಣೆ ಸಂಬಂಧ ಒಂದು ಲಕ್ಷ ರೂ. ಗಿಂತ ಅಧಿಕ ಬ್ಯಾಂಕ್ ಗಳ ವ್ಯವಹಾರ ನಡೆಸಿದರೆ ತೀವ್ರ ನಿಗಾ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಬ್ಯಾಂಕ್ ವ್ಯವಹಾರಗಳ ನಿಗಾ ಸಂಬಂಧ ನಡೆದ ಬ್ಯಾಂಕರ್ಸ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಭ್ಯರ್ಥಿಗಳ ಖಾತೆಯಿಂದ ನಗದು ರೂಪದಲ್ಲಿ 10 ಸಾವಿರ ರೂ. ಮಾತ್ರ ಹಿಂಪಡೆಯಬಹುದು. ಹೆಚ್ಚುವರಿ ಮೊಬಲಗು ಬೇಕಿದ್ದಲ್ಲಿ ಚೆಕ್/ ಆರ್.ಟಿ.ಜಿ.ಎಸ್. ಸೌಲಭ್ಯ ಬಳಸಬೇಕು. ಅಭ್ಯರ್ಥಿಗಳು ಯಾ ಅವರ ಸಂಬಮದಿಕರು ಒಂದು ಲಕ್ಷ ರೂ.ಗಿಂತ ಅಧಿಕ ಮೊಬಲಗಿನ ಬ್ಯಾಂಕ್ ವ್ಯವಹಾರ ನಡೆಸಿದಲ್ಲಿ ಎಂಬ ಈ-ಮೇಲ್ ಐ.ಡಿ.ಗೆ ವರದಿ ಸಲ್ಲಿಸಬೇಕು. ಎ.ಟಿ.ಎಂ.ಗಳಿಗೆ ಹಣ ತುಂಬುವ ಮಂದಿ ಏಜೆನ್ಸಿಗಳ ಸ್ಪಷ್ಟ ದೃಡೀಕರಣ ಪತ್ರ, ಗುರುತುಚೀಟಿ ಹೊಂದಿರಬೇಕು. ಹಣ ಗಣನೆ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಬೇಕು.ಹಣವನ್ನು ಯಾವ ಬ್ಯಾಂಕ್ ನಿಂದ ಯಾವ ಎ.ಟಿ.ಎಂ.ಗೆ ಒಯ್ಯಲಾಗುತ್ತಿದೆ ಎಂಬ ಬಗ್ಗೆ ದಾಖಲೆಪತ್ರಗಳು ಬೇಕು.
ಎರಡು ತಿಂಗಳುಗಳಿಂದ ಯಾವುದೇ ವ್ಯವಹಾರ ನಡೆಯದೇ ಇದ್ದ ಬ್ಯಾಂಕ್ ಖಾತೆಗಳಲ್ಲಿ ಸಂಶಯಾಸ್ಪದ ರೀತಿ ಹಣ ಹಊಡಿಕೆ ಯಾ ಹಣ ಹಿಂಪಡೆಯುವಿಕೆ ನಡೆದಲ್ಲಿ ಈ ಬಗ್ಗೆ ವರದಿ ಸಲ್ಲಿಸಲಾಗುವುದು. ಜೊತೆಗೆ ಆರ್.ಟಿ.ಜಿ.ಎಸ್, ಚೆಕ್ ಇತ್ಯಾದಿ ಮುಖಾಂತರ ನಡೆಯುವ ವ್ಯವಹಾರಗಳ ಬಗ್ಗೆ ನಿಗಾ ಇರಿಸಲಾಗುವುದು. ಕ್ಯಾಷ್ ಕ್ರೆಡಿಟ್ ಅಕೌಂಟ್, ವ್ಯವಹಾರಗಳ ಬಗ್ಗೆ ನಿಗಾ ಇರಿಸಲಾಗುವುದು. ಶಂಕಾಸ್ಪದ ರೀತಿ ಅನೇಕ ಖಾತೆಗಳಿಗೆ ಆರ್.ಟಿ.ಜಿ.ಎಸ್./ ಆನ್ ಲೈನ್ ಮುಖಾಂತರ ವ್ಯವಹಾರ ನಡೆದರೆ ಬ್ಯಾಂಕ್ ಗಳು ವರದಿ ಮಾಡಬೇಕು.
ಅಭ್ಯರ್ಥಿಗಳಿಗೆ ಪ್ರತ್ಯೇಕ ಖಾತೆಗಳಿರಬೇಕು:
ಅಭ್ಯರ್ಥಿಗಳ ನಾಮಪತ್ರಿಕೆ ಸಲ್ಲಿಕೆಗೆ ಒಂದು ದಿನ ಮುಂಚಿತವಾಗಿ ಚುನಾವಣೆಯ ಖರ್ಚುವೆಚ್ಚ ಸಂಬಂಧ ಖಾತೆ ಆರಂಭಿಸಬೇಕು. ಚುನಾವಣೆಯ ನಂತರ ಈ ಖಾತೆಗಳನ್ನು ಮುಕ್ತಾಯಗೊಳಿಸಬೇಕು. ಚುನಾವಣೆಯ ಅಂಗವಾಗಿ ಈ ಖಾತೆಗಳ ಬಗ್ಗೆ ಬ್ಯಾಂಕ್ ಗಳು ಮಾಹಿತಿ ನೀಡಬೇಕು. ಸೂಕ್ತ ದಾಖಲಾತಿಗಳಿಲ್ಲದೆ 50 ಸಾವಿರ ರೂ.ಗಿಂತ ಅಧಿಕ ಮೊಬಲಗು ಸಹಿತ ಪ್ರಯಾಣ ನಡೆಸಿದಲ್ಲಿ ಸ್ಟಾಟಿಕ್ ಸರ್ವೆಲೆನ್ಸ್ ತಂಡ, ಫ್ಲಯಿಂಗ್ ಸ್ಕೌಡ್ ಇತ್ಯಾದಿಗಳು ಪತ್ತೆ ಮಾಡಿ ಕ್ರಮ ಕೈಗೊಳ್ಳಲಿವೆ. ಬ್ಯಾಂಕ್ ಗಳ ಮುಖಾಂತರ ಗ್ರಾಹಕರಿಗೆ ಈ ಮಾಹಿತಿಗಳ ಬಗ್ಗೆ ಆನ್ ಲೈನ್ ಮೂಲಕ ತಿಳಿಸಬೇಕು.
ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಸೈಮನ್ ಫೆನಾರ್ಂಡಿಸ್, ಹಣಕಾಸು ಅಧಿಕಾರಿ ಕೆ.ಸತೀಶನ್ ಉಪಸ್ಥಿತರಿದ್ದರು.