ನವದೆಹಲಿ : ವಾಟ್ಸ್ ಆಯಪ್ ಇದೀಗ ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲೂ ವಾಯ್ಸ್ ಮತ್ತು ವಿಡಿಯೊ ಕಾಲ್ ಸೇವೆಯನ್ನು ಆರಂಭಿಸಿದೆ. ಈ ಮೂಲಕ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಗಳ ಮೂಲಕ ವಾಯ್ಸ್ ಕಾಲ್ ಮತ್ತು ವಿಡಿಯೋ ಕಾಲ್ ಮಾಡಬಹುದು.
ವಾಟ್ಸ್ ಆಯಪ್ ನಲ್ಲಿ ಕಾಲ್ ಮತ್ತು ವಿಡಿಯೊ ಕರೆಗಳು ಎನ್‌ಕ್ರಿಪ್ಟ್ ಆಗಿವೆ. ಆದ್ದರಿಂದ ಫೋನ್‌ಗಳು ಅಥವಾ ಕಂಪ್ಯೂಟರ್‌ಗಳಿಂದ ಮಾಡಲಾದ ಕರೆಗಳನ್ನು ಯಾವುದೇ ಕಾರಣಕ್ಕೂ ವಾಟ್ಸಾಪ್ ಸಂಸ್ಥೆ ಕೇಳಲು ಅಥವಾ ನೋಡಲು ಸಾಧ್ಯವಿಲ್ಲ ಎಂದು ಫೇಸ್‌ಬುಕ್ ತಿಳಿಸಿದೆ.
ಮತ್ತೊಂದು ಫೀಚರ್ ಬಗ್ಗೆ ಮಾಹಿತಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಗ್ರೂಪ್ ಕಾಲ್ ಮತ್ತು ಗ್ರೂಪ್ ವಿಡಿಯೋ ಕಾಲ್ ಮಾಡುವಂತಹ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದೆ.
ಇನ್ನು ಕಳೆದ ವರ್ಷ ಅದ್ರಲ್ಲೂ ಲಾಕ್ ಡೌನ್ ವೇಳೆ ಜನರು ವ್ಯಾಟ್ಸ್ ಆಪ್ ಕಾಲ್ ಗಳನ್ನು ಹೆಚ್ಚು ಬಳಕೆ ಮಾಡಿರುವುದಾಗಿ ವರದಿಯಾಗಿದೆ.