HEALTH TIPS

ಲೈವ್ ಕಾರ್ಯಕ್ರಮದಲ್ಲೇ ನಿರೂಪಕನ ಮೇಲೆ ಬಿದ್ದ ಬೃಹತ್ ಟಿವಿ ಸೆಟ್, ವಿಡಿಯೋ ವೈರಲ್

      ಕೊಲಂಬಿಯಾ: ಲೈವ್ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ನಿರೂಪಕರೊಬ್ಬರ ಮೇಲೆ ಬೃಹತ್ ಟಿವಿ ಸೆಟ್ ಬಿದ್ದ ಘಟನೆಯೊಂದು ನಡೆದಿದೆ.

       ಖ್ಯಾತ ಕ್ರೀಡಾ ವಾಹಿನಿ ಇಎಸ್ ಪಿಎನ್ ನ ಕೊಲಂಬಿಯಾದಲ್ಲಿರುವ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದ್ದು, ಫುಟ್ಬಾಲ್ ಸಂಬಂಧಿ ಪ್ಯಾನಲ್ ಡಿಸ್ಕಷನ್ ಕಾರ್ಯಕ್ರಮ ನಡೆಯುತ್ತಿದ್ದಾಗ ನಿರೂಪಕ ಹಿಂಬದಿಯಲ್ಲಿದ್ದ ಬೃಹತ್ ಟಿವಿ ಆತನ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ನಿರೂಪಕ ತನ್ನ ಮುಂದಿನ ಟೇಬಲ್ ಗೆ ಅಪ್ಪಳಿಸಿದ್ದಾನೆ. ಮತ್ತೊಂದೆಡೆ ಈ ದಿಢೀರ್ ಘಟನೆಯಿಂದಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ಮತ್ತು ಸಹ ನಿರೂಪಕ ತಬ್ಬಿಬ್ಬಾದರು.

      ಘಟನೆಯಲ್ಲಿ ಗಾಯಗೊಂಡ ನಿರೂಪಕನನ್ನು ಕಾರ್ಲೋಸ್ ಒರ್ಡುಜ್ ಎಂದು ಗುರುತಿಸಲಾಗಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ  ಕಾರ್ಲೋಸ್ ಗೆ ಯಾವುದೇ ರೀತಿಯ ಗಂಭೀರ ಪೆಟ್ಟಾಗಿಲ್ಲ, ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಿವಿ ಬಿದ್ದ ರಭಸಕ್ಕೆ ಕಾರ್ಲೋಸ್ ಮೂಗಿಗೆ ಕೊಂಚ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries