ಕಾಸರಗೋಡು: ಪ್ರಸೈಡಿಂಗ್, ಫಸ್ಟ್ ಪೋಲಿಂಗ್ ಅಧಿಕಾರಿಗಳಿಗೆ ತರಬೇತಿ ಇಂದು(ಮಾ.20ರಂದು) ಬೆಳಗ್ಗೆ 10 ಗಂಟೆಗೆ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಡೆಯಲಿದೆ.
ಮಾ.15ರಿಂದ 17 ವರೆಗೆ ನಡೆದಿದ್ದ ತರಬೇತಿಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವ ಮಂದಿಗಾಗಿ ಈ ತರಬೇತಿ ಜರುಗಲಿದೆ. ತರಬೇತಿಯಲ್ಲಿ ಭಾಗವಹಿಸದೇ ದೂರ ಉಳಿದ ಸಿಬ್ಬಂದಿ ವಿರುದ್ಧಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಸೈಮನ್ ಫೆನಾರ್ಂಡಿಸ್ ತಿಳಿಸಿರುವರು.