ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ಒಂ¨ಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿ ಮ್ಯಾಕ್ ಮಿಲನ್ ಎಜುಕೇಶನಿನ ನೇತೃತ್ವದಲ್ಲಿ "ಉನ್ನತ ವಿದ್ಯಾಭ್ಯಾಸ ರಂಗದ ಸಾಧ್ಯತೆಗಳು" ಎಂಬ ವಿಷಯವನ್ನಾಧರಿಸಿ ವೆಬಿನಾರ್ ಏರ್ಪಡಿಸಲಾಯಿತು.
ಖ್ಯಾತ ಶಿಕ್ಷಣ ತಜ್ಞ ಮಹಾತ್ಮ ಗಾಂಧಿ ವಿಶ್ವ ವಿದ್ಯಾಲಯ ಶಾಲೆಯ ಜೀವಶಾಸ್ತ್ರ ವಿಭಾಗದ ಹಿಂದಿನ ಮುಖ್ಯಸ್ಥರಾಗಿದ್ದ ಡಾ.ಪಿ. ಆರ್. ವೆಂಕಿಟರಮಣನ್ ವೆಬಿನಾರ್ ಗೆ ನೇತೃತ್ವ ನೀಡಿದರು.ಭಾರತ ಹಾಗೂ ವಿದೇಶದಲ್ಲಿಯೂ ಇರುವ ವಿವಿಧ ವಿಶ್ವ ವಿದ್ಯಾಲಯಗಳ ಕೋರ್ಸ್‍ಗಳ ಸಾಧ್ಯತೆಗಳ ಬಗೆಗೂ ಪ್ರವೇಶಾತಿ ರೀತಿಗಳ ಬಗೆಗೂ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು. ಬಳಿಕ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿಗಳು, ಅಧ್ಯಾಪಕರು, ಹೆತ್ತವರು ಮೊದಲಾದವರನ್ನುದ್ಧೇಶಿಸಿ ಡಾ.ಟಿ ವೆಂಕಿಟರಮಣನ್ ಮಾತನಾಡಿದರು. ಚಿನ್ಮಯ ವಿದ್ಯಾಲಯ ಪ್ರಾಂಶುಪಾಲೆ ಸಂಗೀತ ಪ್ರಭಾಕರನ್, ರಶ್ಮಿ ಮುರಳೀಧರನ್ ಉಪಸ್ಥಿತರಿದ್ದರು.