ಆದರೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಅಂದು ಶೇ.9.8ರಷ್ಟಿದ್ದ ಉಳಿತಾಯ ದರಕ್ಕಿಂತ ಈ ಬಾರಿ ಉತ್ತಮ ದರ ದಾಖಲಾಗಿದೆ.
ಆರ್ಥಿಕತೆಯು ಕ್ರಮೇಣ ಚೇತರಿಸಿಕೊಳ್ಳುವುದರೊಡನೆ ಜನರು "ಅತ್ಯಗತ್ಯವಾದದ್ದಕ್ಕೆ ಮಾತ್ರ" ಖರ್ಚು ಮಾಡಲು ತೊಡಗಿದ ಕಾರಣ ಕುಟುಂಬಗಳು ನಿಧಾನವಾಗಿ ಕೋವಿಡ್ ಗಿಂತ ಹಿಂದಿನ ತಮ್ಮ ಖರ್ಚುಗಳಿಗೆ ಮರಳುತ್ತಿದೆ ಎಂದು ವರದಿಯಾಗಿದೆ. ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಂದ (ಎನ್‌ಬಿಎಫ್‌ಸಿ) ಗೃಹ ಸಾಲಗಳ ಹೆಚ್ಚಳದಿಂದಾಗಿ ಈ ಬದಲಾವಣೆಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದರೂ, ತಜ್ಞರು ಹೇಳುವಂತೆ ಆದಾಯದಲ್ಲಿ ತೀವ್ರ ಕುಸಿತವು ಇದಕ್ಕೆ ಮೂಲ ಕಾರಣವಾಗಿದೆ ಎನ್ನಬಹುದು. ಉದ್ಯೋಗ ನಷ್ಟ ಮತ್ತು ಕಡಿಮೆ ಆದಾಯದ ಮಟ್ಟಗಳ ಹೊರತಾಗಿಯೂ ಕುಟುಂಬಗಳು ಇನ್ನೂ ಬಳಕೆ ತಗ್ಗಿಸಿಲ್ಲ. ವ್ಯಾಪಕವಾದ ಆರ್ಥಿಕ ಸಂಕಷ್ಟದ ಮಧ್ಯೆಹೆಚ್ಚುತ್ತಿರುವ ಆಹಾರದ ಬೆಲೆಗಳು ಜನರು ಹೆಚ್ಚು ಉಳಿತಾಯ ಮಾಡದಂತೆ ಒತ್ತಾಯಿಸಿದೆ.
ಆರ್‌ಬಿಐ ಪ್ರಕಾರ, ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳಿಂದ ಸಾಲ ಪಡೆಯುವುದರಿಂದ ಠೇವಣಿಗಳ ರೂಪದಲ್ಲಿ ಉಳಿತಾಯ ಹೆಚ್ಚಿದರೂ ಮನೆಯ ಹಣಕಾಸು ಉಳಿತಾಯ ಪ್ರಮಾಣ ಮಧ್ಯಮ ಗಾತ್ರದಲ್ಲಿರಲಿದೆ. ಆಸ್ತಿಗಳ ದೃಷ್ಟಿಯಲ್ಲಿ ಉಳಿತಾಯವು ಕರೆನ್ಸಿಯ ರೂಪದಲ್ಲಿ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯ ಶೇ.0.4ಕ್ಕೆ ತಲುಪಿದೆ. ಒಂದನೇ ತ್ರೈಮಾಸಿಕದಲ್ಲಿ ಹೋಲಿಸಿದರೆ ಗಮನಾರ್ಹ ಕುಸಿತ ಕಂಡುಬಂದಿದೆ. ಒಂದನೇ ತ್ರೈಮಾಸಿಕದಲ್ಲಿ ಇದರ ಪ್ರಮಾಣ ಶೇ. 5.3ರಷ್ಟಿತ್ತು. . ಅಂತೆಯೇ, ಮ್ಯೂಚುವಲ್ ಫಂಡ್ ಉತ್ಪನ್ನಗಳಲ್ಲಿನ ಹೂಡಿಕೆ ಪ್ರಮಾಣ ಶೇ.1.7ರಿಂದ ಶೇ.0.3ಕ್ಕೆ ಇಳಿದಿದೆ, ಆದರೆ ವಿಮಾ ಉತ್ಪನ್ನಗಳ ರೂಪದಲ್ಲಿ ಉಳಿತಾಯವು ಒಂದನೇ ತ್ರೈಮಾಸಿಕದಲ್ಲಿ ಶೇ. 3.2 ಇದ್ದದ್ದು ಶೇ.3ಕ್ಕೆ ತಲುಪಿದೆ.
ಈ ಮಧ್ಯೆ, ಸಾಂಕ್ರಾಮಿಕ ರೋಗದ ಆರ್ಥಿಕ ಸಂಕಟಗಳು 3.2 ಕೋಟಿ ಭಾರತೀಯರನ್ನು ಬಡತನಕ್ಕೆ ತಳ್ಳಿದ್ದರಿಂದ ಭಾರತೀಯ ಮಧ್ಯಮ ವರ್ಗ ಕುಗ್ಗಿದೆ ಎಂದು Pew Research ಮಧ್ಯಮ ವರ್ಗದ ಜನಸಂಖ್ಯೆಯು ಸಾಂಕ್ರಾಮಿಕ ಪೂರ್ವದ ಅಂದಾಜು 9.9 ಕೋಟಿಯಿಂದ 6.6 ಕೋಟಿಗೆ ಕುಗ್ಗಿದೆ ಎಂದು ಅದು ಹೇಳಿದೆ.