ನವದೆಹಲಿ: ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ಹಿಂಸಾಚಾರ, ಅಪರಾಧದಂತಹ ಕಠಿಣ ಕ್ರಮಕ್ಕೆ ಮುಂದಾಗದಂತೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ವೇದಿಕೆ(ಯುಎನ್‌ಎಚ್‌ಆರ್‌ಸಿ) ತೆಗೆದುಕೊಂಡಿರುವ ನಿರ್ಣಯ ಸಂಬಂಧ ಮತದಾನ ಮಾಡುವುದರಿಂದ ಭಾರತ ದೂರು ಉಳಿದಿದೆ.
ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವೇದಿಕೆಯ 46ನೇ ನಿಗದಿತ ಅಧಿವೇಶನದಲ್ಲಿ ತೆಗೆದುಕೊಂಡಿರುವ ನಿರ್ಣಯದ ಮೇಲೆ ಭಾರತ ಸೇರಿದಂತೆ 13 ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ. 47ರಲ್ಲಿ 22 ಸದಸ್ಯರು ಪರವಾಗಿ ಮತ ಚಲಾಯಿಸಿದ್ದು ಲಂಕಾ ವಿರುದ್ಧದ ನಿರ್ಣಯವನ್ನು ಅಂಗೀಕರಿಸಿದೆ.
ಜಿನೀವಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವೇದಿಕೆಯ ನಿರ್ಣಯದ ಪರವಾಗಿ ಮತ ಚಲಾಯಿಸುವಂತೆ ನಮ್ಮ ಭಾರತೀಯ ಪ್ರತಿನಿಧಿಗಳಿಗೆ ಸೂಚನೆ ನೀಡುವಂತೆ ನಾವು ಭಾರತ ಸರ್ಕಾರವನ್ನು ಕೋರುತ್ತೇವೆ ಎಂದು ಎಐಎಡಿಎಂಕೆಯ ತಂಬಿದುರೈ ಮನವಿ ಮಾಡಿದ್ದರು.
ಜಿನೀವಾದಲ್ಲಿ ಭಾರತದ ನಿಯೋಗವು ತಮಿಳರ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶವನ್ನು ಬೆಂಬಲಿಸುವ ಮೂಲಕ ಪ್ರಧಾನ ಮಂತ್ರಿಗಳ ಭರವಸೆಗಳನ್ನು ಈಡೇರಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದಿದ್ದರು.
ಇಂಗ್ಲೆಂಡ್, ಜರ್ಮನಿ, ಮಲಾವಿ, ಮಾಂಟೆನೆಗ್ರೊ ಮತ್ತು ಉತ್ತರ ಮ್ಯಾಸಿಡೋನಿಯಾಗಳನ್ನು ಒಳಗೊಂಡ ಕೋರ್ ಗ್ರೂಪ್ ಸಲ್ಲಿಸಿದ ನಿರ್ಣಯದ ಮತದಾನ ಇಂದು ನಡೆಯಿತು. ಜನವರಿ 27ರಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿ ಬಿಡುಗಡೆ ಮಾಡಿದ ವರದಿಯ ನಂತರ ಈ ನಿರ್ಣಯವು ಬಂದಿದೆ.