ಕಾಸರಗೋಡು: ವಿಧಾನಸಭಾ ಚುನಾವಣೆ ಸಂಬಂಧ ಅಭ್ಯರ್ಥಿಗಳ ಮತ್ತು ರಾಜಕೀಯ ಪ್ರತಿನಿಧಿಗಳ ಪ್ರಚಾರಕ್ಕೆ ಪಿ.ವಿ.ಸಿ.ಫ್ಲೆಕ್ಸ್, ಬ್ಯಾನರ್, ಪ್ಲಾಸ್ಟಿಕ್ ಧ್ವಜ-ತೋರಣ ಇತ್ಯಾದಿಗ¼ಳನ್ನು ಬಳಸದೆ, ಪರಿಸರ ಪೂರಕ ಚುನಾವಣೆ ಈ ಬಾರಿ ನಡೆಯಬೇಕು ಎಂಬುದಾಗಿ ಚುನಾವಣೆ ಆಯೋಗ ಆದೇಶಿಸಿದೆ.
ಪಿ.ವಿ.ಸಿ. ಪ್ಲಾಸ್ಟಿಕ್ ಬೆರೆತ ಕೊರಿಯನ್ ಬಟ್ಟೆ, ನೈಲಾನ್, ಪಾಲಿಸ್ಟರ್, ಪಾಲಿಸ್ಟರ್ ಬಟ್ಟೆಗಳು ಇತ್ಯಾದಿ ಪ್ಲಾಸ್ಟಿಕ್ ಅಂಶ ಯಾ ಲೇಪನ ಹೊಂದಿರುವ ಪುನರ್ ಬಳಕೆ ಸಾಧ್ಯತೆಯಿಲ್ಲದಿರುವ ಬ್ಯಾನರ್, ಬೋರ್ಡ್ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ಪ್ರಚಾರಕ್ಕೆ ಬಳಸದೆ, ಶೇ. ನೂರು ಹತ್ತಿ ಬಟ್ಟೆ ಬಳಸಿ ಮುದ್ರಿಸುವ ಬ್ಯಾನರ್, ಫಲಕಗಳನ್ನು ಮಾತ್ರ ಬಳಸಬೇಕು. ರೀಸೈಕ್ಲೇಬಲ್, ಪಿ.ವಿ.ಸಿ. ಫ್ರೀ ಎಂಬ ಲೋಗೋ, ಬಳಕೆ ಕೊನೆಗೊಳ್ಳುವ ಹೆಸರು, ಪ್ರಿಂಟಿಂಗ್ ನಂಬ್ರ ಕಡ್ಡಾಯವಾಗಿ ಪ್ರಚಾರ ಸಾಮಾಗ್ರಿಗಳನ್ನು ಬಳಸಬೇಕು. ನಿಷೇಧಿತ ಉತ್ಪನ್ನಗಳ ಬಳಕೆ ಪತ್ತೆಯಾದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಕಾನೂನು ಕ್ರಮ ಕೈಗೊಳ್ಳುವರು. ಪುನರ್ ಬಳಕೆ ಪ್ರಚಾರ ಸಾಮಾಗ್ರಿಗಳ ಬಳಕೆ ನಂತರ ಆಯಾ ರಾಜಕೀಯ ಪಕ್ಷಗಳು ಸಂಗ್ರಹಿಸಿ ಸ್ಥಳೀಯಾಡಳಿತ ಸಂಸ್ಥೆಗಳ ಹರಿತ ಕ್ರಿಯಾ ಸೇನೆಗಳ ಮುಖಾಂತರ ಸರಕಾರಿ ಕಂಪನಿ ಕ್ಲೀನ್ ಕೇರಳ ಕಂಪನಿ ನಿಗಮಕ್ಕೆ
ಹಸ್ತಾಂತರಿಸಬೇಕು.
ರಾಜಕೀಯ ಪಕ್ಷಗಳ ಚುನಾವಣಾ ಕಚೇರಿಗಳ ಅಲಂಕಾರಕ್ಕೂ ಪ್ರಾಕೃತಿಕವಾಗಿ ಲಭಿಸುವ ಸಾಮಾಗ್ರಿಗಳನ್ನು ಬಳಸಬೇಕು.
ಮತಗಟ್ಟೆಗಳ ಸಜ್ಜೀಕರಣ ವೇಳೆ ನಿಷೇಧಿತ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ಕೈಬಿಡುವುದರ ಜತೆಗೆ ಚುನಾವಣೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳಲ್ಲಿ ಹಸಿರು ಸಂಹಿತೆ ಕಡ್ಡಾಯವಾಗಿ ಪಾಲಿಸುವಂತೆಯೂ ಸೂಚಿಸಲಾಗಿದೆ.