ಕೊಲ್ಲಂ: ಚುನಾವಣಾ ಪ್ರಚಾರ ಅಭಿಯಾನದ ಸಂದರ್ಭದಲ್ಲಿ ಕೊಲ್ಲಂ ಕ್ಷೇತ್ರದ ಎಲ್‍ಡಿಎಫ್ ಅಭ್ಯರ್ಥಿ ಮತ್ತು ನಟ ಎಂ.ಮುಖೇಶ್ ಅವರು ವಾಹನದಲ್ಲಿ ಮೀನುಗಾರರಿಗೆ ಕಿಟ್‍ಗಳನ್ನು ಹಸ್ತಾಂತರಿಸಿದ ಘಟನೆ ಇದೀಗ ವಿವಾದಕ್ಕೆ ಎಡೆಯಾಗಿದೆ. ಶನಿವಾರ ತಂಕಾಸ್ಸೆರಿ ವಾಡಿ ಕರಾವಳಿ ಪ್ರದೇಶದಲ್ಲಿ ನಡೆದ ಅಭಿಯಾನದ ಸಂದರ್ಭದಲ್ಲಿ ಪೂರ್ವ ನಿರ್ಧರಿಸಿದಂತೆ ಕಿಟ್ ವಿತರಿಸಲಾಗಿತ್ತು.
ಮೀನುಗಾರರಿಗೆ ಸರ್ಕಾರ ಒದಗಿಸಿದ ಆಹಾರ ಧಾನ್ಯ ಕಿಟ್ ಪಡಿತರ ಅಂಗಡಿಗೆ ತಲಪಿಸಿದ್ದೇನೆ ಎಂದು ಮುಖೇಶ್ ಫೇಸ್ ಬುಕ್‍ನಲ್ಲಿ ಬರೆದಿದ್ದಾರೆ. ಆದರೆ ಇದು ಮತಗಳನ್ನು ಪಡೆಯಲು ಅಧಿಕಾರಿಗಳ ಸಹಾಯದಿಂದ ನಾಯಕರು ರೂಪಿಸಿದ ಯೋಜನೆಯಾಗಿದೆ. ಶಾಸಕರ ಕ್ರಮವು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದಿರುವ ಪ್ರತಿಪಕ್ಷಗಳು ದೂರು ನೀಡುವುದಾಗಿ ತಿಳಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಹೇಳಿಕೆ ನೀಡಿವೆ.
ಚುನಾವಣೆಗೆ ಮೊದಲು ಚುನಾವಣಾ ಆಯೋಗವು ಸರ್ಕಾರಕ್ಕೆ 10 ಕೆಜಿ ಅಕ್ಕಿಯನ್ನು 15 ರೂ.ಗಳ ದರದಲ್ಲಿ ಆದ್ಯತೆಯಿಲ್ಲದ ವಿಭಾಗಗಳಿಗೆ ವಿತರಿಸುವುದನ್ನು ನಿಷೇಧಿಸಿತ್ತು. ಶಾಲಾ ಮಕ್ಕಳ ಮಧ್ಯಾಹ್ನ ಊಟದ ಏಳು ತಿಂಗಳ ಅಕ್ಕಿಯನ್ನು ಜಂಟಿಯಾಗಿ ವಿತರಿಸಲು ಸರ್ಕಾರ ಮುಂದಾಗಿತ್ತು. ಎಲ್‍ಡಿಎಫ್ ಕೂಡ ಚುನಾವಣೆಗೆ ಮುನ್ನ ಕಲ್ಯಾಣ ಪಿಂಚಣಿ ವಿತರಿಸುವ ಮೂಲಕ ಮತಗಳನ್ನು ಪಡೆಯಲು ಪ್ರಯತ್ನಿಸುತ್ತಿರುವುದೂ ವಿವಾದಕ್ಕೆ ಎಡೆಮಾಡಿದೆ.