HEALTH TIPS

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ 10 ಮತ್ತು 12ನೇ ತರಗತಿ ಸಿಬಿಎಸ್ ಇ ಪರೀಕ್ಷೆ ವೇಳಾಪಟ್ಟಿ ನಕಲಿ: ಮಂಡಳಿ ಸ್ಪಷ್ಟನೆ

           ಚೆನ್ನೈ: 10 ಮತ್ತು 12ನೇ ತರಗತಿ ಸಿಬಿಎಸ್ ಇ ನಕಲಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.


        ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಬಿಎಸ್ ಇ, ನಿಗದಿಯಂತೆ ಮೇ 4ರಿಂದ ಜೂನ್ 10ರವರೆಗೆ ಪರೀಕ್ಷೆ ನಡೆಯಲಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೇಳಾಪಟ್ಟಿ ಕಳೆದ ವರ್ಷ ಪರೀಕ್ಷಾ ವೇಳಾಪಟ್ಟಿಗೆ ಸಂಬಂಧಪಟ್ಟಂತೆ ಹೊರಡಿಸಿದ ಸುತ್ತೋಲೆಯಾಗಿದೆ. ಈ ನಕಲಿ, ಸುಳ್ಳು ವೇಳಾಪಟ್ಟಿಯನ್ನು ವಿದ್ಯಾರ್ಥಿಗಳು ಪರಿಗಣಿಸಬೇಡಿ ಎಂದು ಸಿಬಿಎಸ್ ಇ ಸ್ಪಷ್ಟನೆ ನೀಡಿದೆ.

ಸಿಬಿಎಸ್ ಇ 10 ಮತ್ತು 12ನೇ ತರಗತಿ ಪರೀಕ್ಷೆ ಬಗ್ಗೆ ಕಳೆದ ವರ್ಷದ ವೇಳಾಪಟ್ಟಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿಸಿ ಕೆಲವರು ಗೊಂದಲ ಸೃಷ್ಟಿಸಲು ನೋಡುತ್ತಿದ್ದಾರೆ. ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಇದನ್ನು ನಂಬಬೇಡಿ. ಮಂಡಳಿಯಿಂದ ಯಾವುದೇ ಇಂತಹ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿಲ್ಲ ಎಂದು ಸಿಬಿಎಸ್ ಇ ಸ್ಪಷ್ಟನೆ ನೀಡಿದೆ.

         ನಕಲಿ ವೇಳಾಪಟ್ಟಿಯಲ್ಲಿ 12 ಮತ್ತು 10ನೇ ತರಗತಿಗೆ ವಾರ್ಷಿಕ ಪರೀಕ್ಷೆ ಜುಲೈ 11 ಮತ್ತು 13 ಎಂದು ಇದೆ. ಫಲಿತಾಂಶ ಜುಲೈ 15ರಂದು ಪ್ರಕಟವಾಗುವ ನಿರೀಕ್ಷೆಯಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries