ನವದೆಹಲಿ: ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ ಮತ್ತು ದೆಹಲಿ ಸೇರಿದಂತೆ ಹತ್ತು ರಾಜ್ಯಗಳಲ್ಲಿ ಒಂದೇ ದಿನ ಶೇಕಡಾ 69.1 ರಷ್ಟು ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ಒಂದು ದಿನದಲ್ಲಿ 3,23,144 ಜನರು ಕೊರೋನಾ ಸೋಂಕಿಗೆ ಒಳಗಾಗಿದ್ದರೆ ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 1,76,36,307 ಕ್ಕೆ ಏರಿದೆ ಎಂದು ಅದು ಹೇಳಿದೆ.
ಕೇರಳ, ಕರ್ನಾಟಕ, ಛತ್ತೀಸ್ ಘರ್, ಪಶ್ಚಿಮ ಬಂಗಾಳ, ತಮಿಳುನಾಡು, ಗುಜರಾತ್ ಮತ್ತು ರಾಜಸ್ಥಾನಗಳು ಸಹ 10 ರಾಜ್ಯಗಳ ಪಟ್ಟಿಯಲ್ಲಿ ಸೇರಿವೆ. "ಒಟ್ಟಾರೆಯಾಗಿ, ಇದುವರೆಗೆ 28 ಕೋಟಿಗೂ ಹೆಚ್ಚು ಕೋವಿಡ್ ಟೆಸ್ಟ್ ನಡೆದಿವೆ, ಆದರೆ ಪಾಸಿಟಿವ್ ರೇಟಿಂ ಶೇ. 6.28 ಆಗಿದೆ" ಎಂದು ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರವು ಒಂದೇ ದಿನ 48,700 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಉತ್ತರ ಪ್ರದೇಶದಲ್ಲಿ 33,551, ಕರ್ನಾಟಕದಲ್ಲಿ 29,744 ಹೊಸ ಪ್ರಕರಣ ದಾಖಲಾಗಿದೆ. ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ28,82,204 ತಲುಪಿದೆ ಮತ್ತು ಒಟ್ಟು ಸೋಂಕಿತರ ಪೈಕಿ ಇದು ಶೇಕಡಾ 16.34 ರಷ್ಟಿದೆ. ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 24 ಗಂಟೆಗಳ ಅವಧಿಯಲ್ಲಿ 68,546 ಪ್ರಕರಣಗಳ ಹೆಚ್ಚಳವಾಗಿದೆ, ಮಹಾರಾಷ್ಟ್ರ, ಛತ್ತೀಸ್ ಘರ್, ಉತ್ತರ ಪ್ರದೇಶ, ಕರ್ನಾಟಕ, ರಾಜಸ್ಥಾನ, ತಮಿಳುನಾಡು, ಗುಜರಾತ್ ಮತ್ತು ಕೇರಳ ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ.69.1 ಪಾಲನ್ನು ಹೊಂದಿದೆ. ದೇಶದ ಒಟ್ಟು ಪ್ರಕರಣಗಳಲ್ಲಿ, ಸಕ್ರಿಯ ಪ್ರಕರಣಗಳು ಶೇಕಡಾ 16.43 ಮತ್ತು ಚೇತರಿಕೆ ಶೇಕಡಾ 82.54 ರಷ್ಟಿದೆ. ದೈನಂದಿನಪಾಸಿಟಿವ್ ದರ ಪ್ರಸ್ತುತ ಶೇಕಡಾ 20.02 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಸಾವಿನ ಪ್ರಮಾಣ (ಸಿಎಫ್‌ಆರ್) ಕುಸಿಯುತ್ತಿದೆ ಮತ್ತು ಇದು ಪ್ರಸ್ತುತ ಶೇಕಡಾ 1.12 ರಷ್ಟಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 2,771 ಸಾವುಗಳು ವರದಿಯಾಗಿವೆ. ಹೊಸ ಸಾವಿನ ಪ್ರಕರಣದಲ್ಲಿ ಶೇಕಡಾ 77.3 ರಷ್ಟು ಹತ್ತು ರಾಜ್ಯಗಳಿಂದ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಎಂದರೆ 524 ಸಾವಾಗಿದ್ದರೆ ದೆಹಲಿಯಲ್ಲಿ 380 ಮಂದಿ ನಿಧನವಾಗಿದ್ದಾರೆ. ಭಾರತದಚೇತರಿಕೆ 1,45,56,209 ಕ್ಕೆ ಏರಿದ್ದು, 2,51,827 ರೋಗಿಗಳು 24 ಗಂಟೆಗಳ ಅವಧಿಯಲ್ಲಿ ಚೇತರಿಸಿಕೊಂಡಿದ್ದಾರೆ.
ಕೋವಿಡ್-19 ವಿರುದ್ಧ ವ್ಯಾಕ್ಸಿನೇಷನ್ ಮಾಡುವಾಗ, ದೇಶದಲ್ಲಿ ನೀಡಲಾಗುವ ಲಸಿಕೆ ಪ್ರಮಾಣಗಳ ಒಟ್ಟು ಸಂಖ್ಯೆ 14.5 ಕೋಟಿ ದಾಟಿದೆ. ತಾತ್ಕಾಲಿಕ ವರದಿಯ ಪ್ರಕಾರ ಬೆಳಿಗ್ಗೆ 7 ಗಂಟೆಯವರೆಗೆ 14,52,71,186 ಲಸಿಕೆ ಪ್ರಮಾಣವನ್ನು 20,74,721 ಶೆಡ್ಯೂಲ್ ಮೂಲಕ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
93,24,770 ಆರೋಗ್ಯ ಕಾರ್ಯಕರ್ತರು (ಎಚ್‌ಸಿಡಬ್ಲ್ಯು) ಮೊದಲ ಡೋಸ್ ತೆಗೆದುಕೊಂಡರೆ ಎರಡನೇ ಡೋಸ್ ತೆಗೆದುಕೊಂಡ 60,60,718 ಎಚ್‌ಸಿಡಬ್ಲ್ಯೂ ಸೇರಿದ್ದು 1,21,10,258 ಮುಂಚೂಣಿ ಕಾರ್ಯಕರ್ತರು(ಎಫ್‌ಎಲ್‌ಡಬ್ಲ್ಯೂ) ಮೊದಲ ಡೋಸ್ ಪಡೆದಿದ್ದರೆ ್64,25,992 ಎಫ್‌ಎಲ್‌ಡಬ್ಲ್ಯೂಗಳು ಎರಡನೇ ಡೋಸ್ ತೆಗೆದುಕೊಂಡಿದ್ದಾರೆ.
60 ವರ್ಷಕ್ಕಿಂತ ಮೇಲ್ಪಟ್ಟ 5,05,77,743 ಮತ್ತು 87,31,091 ಫಲಾನುಭವಿಗಳಿಗೆ ಕ್ರಮವಾಗಿ ಮೊದಲ ಮತ್ತು ಎರಡನೆಯ ಡೋಸ್ ನೀಡಲಾಗಿದೆ., 45 ರಿಂದ 60 ವರ್ಷ ವಯಸ್ಸಿನ 4,93,48,238 ಮತ್ತು 26,92,376 ಫಲಾನುಭವಿಗಳು ಮೊದಲ ಮತ್ತು ಎರಡನೆಯ ಡೋಸ್ ಪಡೆದಿದ್ದಾರೆ. ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳ, ಕರ್ನಾಟಕ, ಮಧ್ಯಪ್ರದೇಶ, ಕೇರಳ, ಬಿಹಾರ ಮತ್ತು ಆಂಧ್ರಪ್ರದೇಶ ದೇಶದಲ್ಲಿ ಈವರೆಗೆ ನೀಡಲಾದ ಒಟ್ಟು ಡೋಸ್ ಗಳಲ್ಲಿ ಶೇಕಡಾ 67.3 ಪಾಲನ್ನು ಹೊಂದಿದೆ.
31 ಲಕ್ಷಕ್ಕೂ ಹೆಚ್ಚು ಲಸಿಕೆ ಪ್ರಮಾಣವನ್ನು 24 ಗಂಟೆಗಳ ಅವಧಿಯಲ್ಲಿ ನೀಡಲಾಯಿತು ಮತ್ತು ವ್ಯಾಕ್ಸಿನೇಷನ್ ಡ್ರೈವ್ (ಏಪ್ರಿಲ್ 26) ನ ದಿನ -101 ರಂತೆ 31,74,688 ಲಸಿಕೆ ಡೋಸ್ ನೀಡಲಾಯಿತು. ಮೊದಲ ಡೋಸ್‌ಗೆ 22,797 ಸೆಷನ್‌ಗಳಲ್ಲಿ 19,73,778 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದ್ದು, 12,00,910 ಫಲಾನುಭವಿಗಳು ಕೋವಿಡ್ -19 ವಿರುದ್ಧ ಎರಡನೇ ಡೋಸ್ ಲಸಿಕೆಗಳನ್ನು ಪಡೆದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.