HEALTH TIPS

ಲಸಿಕೆ ಪಡೆದ 10,000 ಭಾರತೀಯರಲ್ಲಿ ಇಬ್ಬರಿಂದ 4 ಜನರಿಗಷ್ಟೇ ಸೋಂಕು: ಐಸಿಎಂಆರ್

           ನವದೆಹಲಿ: ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಏರಿಳಿತ ನಡುವೇ ಅನೇಕ ಜನರು ಲಸಿಕೆ ಪಡೆದ ತರುವಾಯವೂ ಕೋವಿಡ್ -19 ಸೋಂಕಿಗೆ ಒಳಗಾಗಿತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಬುಧವಾರ ಬಿಡುಗಡೆಗೊಳಿಸಿದ ದತ್ತಾಂಶ ಹೇಳುವಂತೆ ಅಂತಹ ಸೋಂಕಿತರ ಸಂಖ್ಯೆ ತೀರಾ ಕನಿಷ್ಟ ಪ್ರಮಾಣದಲ್ಲಿದೆ.

       ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ, ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ ಅವರು, ಭಾರತದಲ್ಲಿ ಇಲ್ಲಿಯವರೆಗೆ ಲಸಿಕೆ ಪಡೆದ 10,000 ಜನರ ಪೈಕಿ 2 ರಿಂದ 4 ಜನರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ ಎಂದಿದ್ದಾರೆ. ಆದಾಗ್ಯೂ, ಈ ಸೋಂಕುಗಳು ಎಷ್ಟು ತೀವ್ರವಾದ ಕಾಯಿಲೆ ಅಥವಾ ಸಾವಿಗೆ ಕಾರಣವಾಗಿದೆ ಎನ್ನುವುದನ್ನು ಅವರು ವಿವರಿಸಲಿಲ್ಲ.

               ಮೇ 1 ರಿಂದ ದೇಶದ ಎಲ್ಲ ಪ್ರಾಪ್ತ ವಯಸ್ಕರಿಗೆ ಲಸಿಕೆ ವಿತರಣೆ ಪ್ರಾರಂಭವಾಗಿರುವ ಹಿನ್ನೆಲೆ ಲಸಿಕೆ ಪಡೆದವರಿಗೆ ಸೋಂಕು ಹರಡುತ್ತಿದೆ ಎನ್ನುವ ಮಾಹಿತಿ ವಾಸ್ತವದಿಂದ ದೂರವಿದೆ" ಎಂದು ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥರಾದ ನೀತಿ ಆಯೋಗ್‌ನ ಸದಸ್ಯ (ಆರೋಗ್ಯ) ವಿಕೆ ಪಾಲ್ ಹೇಳಿದರು. "ಲಸಿಕೆಯ ಮೊದಲ ಮತ್ತು ಎರಡನೆಯ ಡೋಸ್ ನಂತರ ಕೋವಿಡ್ ಸೋಂಕು ಕಾಣಿಸಿದ್ದರೂ ಅದು ತೀವ್ರವಾದ ಕಾಯಿಲೆಗೆ ಕಾರಣವಾಗುವುದಿಲ್ಲ. ಸೋಂಕಿನ ಅಪಾಯವಿದೆ, ಅದಕ್ಕಾಗಿಯೇ ಮಾಸ್ಕ್ ಮುಖ್ಯವಾದರೂ ತೀವ್ರವಾದ ಸೋಂಕಿನ ಅಪಾಯವು ಗಣನೀಯವಾಗಿ ಕಡಿಮೆಯಾಗುತ್ತದೆ. '

           ಪ್ರತಿರಕ್ಷಣಾ ಪ್ರತಿಕ್ರಿಯೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದಾದರೂ, ಲಭ್ಯವಿರುವ ಲಸಿಕೆಗಳು ಎರಡನೆಯ ಡೋಸ್‌ನ ಎರಡು ವಾರಗಳ ನಂತರ ಹೆಚ್ಚು ಪರಿಣಾಮಕಾರಿ ಎಂದು ಭಾರ್ಗವ ಹೇಳಿದ್ದಾರೆ. ಭಾರತ್ ಬಯೋಟೆಕ್‌ನಿಂದ ಕೋವಾಕ್ಸಿನ್‌ನ ಮೊದಲ ಪ್ರಮಾಣವನ್ನು ಪಡೆದ 93,56,436 ಜನರಲ್ಲಿ 4,208 (0.04%) ಮಂದಿ ಸೋಂಕನ್ನು ಹೊಂದಿದ್ದಾರೆ ಎಂದು ಬ್ರೀಫಿಂಗ್‌ನಲ್ಲಿ ಪ್ರಸ್ತುತಪಡಿಸಿದ ಮಾಹಿತಿಯು ತೋರಿಸಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ 19 ಲಸಿಕೆಯ ಎರಡನೇ ಪ್ರಮಾಣವನ್ನು ಪಡೆದವರಿಗೆ 7,37,178 ರಲ್ಲಿ ಎರಡನೇ ಮತ್ತು ಅಂತಿಮ ಡೋಸ್ ಪಡೆದ 695 ಜನರಿಗೆ ಸೋಂಕು ತಗುಲಿತು. ಖೊವಿಶೀಲ್ಡ್ ನ ಮೊದಲ ಡೋಸ್ ಪಡೆದ 10,03,02,745 ಜನರಲ್ಲಿ, 17,145 ಅಥವಾ 0.02% ಜನರು ಸೋಂಕಿಗೆ ತುತ್ತಾಗಿದ್ದಾರೆ.ಈ ಲಸಿಕೆಯ ಎರಡನೇ ಡೋಸ್ ಪಡೆದ 1,57,32,754 ಜನರಲ್ಲಿ, 5,014 ಅಥವಾ 0.03% ರಷ್ಟು ಪ್ರಮಾಣದ ಜನ ಸೋಂಕಿಗೀಡಾಗಿದ್ದಾರೆ.

ಲಸಿಕೆ ಹಾಕಿದ ದೇಶದ ಸುಮಾರು 77 ಮಿಲಿಯನ್ ವ್ಯಕ್ತಿಗಳಲ್ಲಿ ಸುಮಾರು 5,800 ಮಂದಿಗೆ ಸೋಂಕುಗಳ ವರದಿಗಳಿವೆ ಎಂದು ಯುಎಸ್ ನಲ್ಲಿನ ರೋಗ ನಿಯಂತ್ರಣ ಕೇಂದ್ರ ಕಳೆದ ವಾರ ಹೇಳಿದ ಒಂದು ವಾರದ ನಂತರ ಭಾರತ ಸರ್ಕಾರದ ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ಯಾವುದೇ ಲಸಿಕೆ ಸೋಂಕಿನ ವಿರುದ್ಧ 100% ಪರಿಣಾಮಕಾರಿಯಲ್ಲದ ಕಾರಣ ಇಂತಹ ಪ್ರಕರಣಗಳು ಅನಿರೀಕ್ಷಿತವಲ್ಲ ಎಂದು ತಜ್ಞರು ಹೇಳುತ್ತಾರೆ ಆದರೆ ಲಸಿಕೆಗಳನ್ನು ಬಳಸುತ್ತಿರುವವರ ಪರಿಣಾಮಕಾರಿತ್ವದ ದತ್ತಾಂಶವನ್ನು ಸರ್ಕಾರವು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಹೇಳುತ್ತಾರೆ. "ಲಸಿಕೆ ಸೋಂಕುಮತ್ತು ತೀವ್ರ ಕಾಯಿಲೆಗಳಿಂದ ಹೇಗೆ ರಕ್ಷಿಸುತ್ತಿದೆ ಮತ್ತು ಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂಬುದನ್ನು ತೋರಿಸಲು ಸರ್ಕಾರವು ಲಸಿಕೆಗಳ ವಿವರವಾದಪರಿಣಾಮಕಾರಿತ್ವದ ಡೇಟಾವನ್ನು ಬಿಡುಗಡೆ ಮಾಡಿದರೆ ಒಳ್ಳೆಯದು" ಎಂದು ರೋಗನಿರೋಧಕ ತಜ್ಞರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries