ತಿರುವನಂತಪುರ: ಕೊರೊನಾ ಸೋಂಕು ನಿವಾರಣೆಯ ಭಾಗವಾಗಿ ನಡೆಯುತ್ತಿರುವ ವಾಕ್ಸಿನೇಶನ್ ಚಟುವಟಿಕೆಗೆ ಬೆಂಬಲ ಸೂಚಿಸಲೋ ಎಂಬಂತೆ ರಾಜ್ಯದಲ್ಲಿ ಲಸಿಕೆ ಹಾಕಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ 104 ನೇ ವಯಸ್ಸಿನ ಮಹಿಳೆ ಅನ್ನಂ ಅವರ ಪಾಲಾಗಿದೆ.
ಅಂಗಮಾಲಿ ತಾಲೂಕು ಆಸ್ಪತ್ರೆಯಲ್ಲಿ ಬುಧವಾರ ತಮ್ಮ 104 ನೇ ವಯಸ್ಸಿನಲ್ಲಿ, ಕೊರೋನಾ ಲಸಿಕೆ ಪಡೆದುಕೊಂಡರು. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ವೃದ್ದರೋರ್ವರಿಗೆ ಕೊರೋನಾ ಲಸಿಕೆ ಲಸಿಕೆ ನೀಡಿರುವುದು ವಾಕ್ಸಿನೇಶನ್ ಚಟುವಟಿಕೆಗೆ ಹೆಮ್ಮೆ ತರಿಸಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಅಂಗಮಾಲಿ ಮೂಲದ ಅನ್ನಮ್ ಲಸಿಕೆ ಸ್ವೀಕರಿಸಲು ತನ್ನ ಮಕ್ಕಳೊಂದಿಗೆ ನಿನ್ನೆ ಆಗಮಿಸಿದ್ದರು. ವರ್ಕಿ ಎಂಬವರ ಪತ್ನಿಯಾದ ಇವರಿಗೆ ಏಳು ಮಕ್ಕಳು, 14 ಮೊಮ್ಮಕ್ಕಳು ಮತ್ತು 22 ಮರಿ-ಮೊಮ್ಮಕ್ಕಳು ಇದ್ದಾರೆ. ಭೀಕರ ಸಾಂಕ್ರಾಮಿಕ ರೋಗ ಕೊರೊನಾದ ಅನುಭವಗಳ ಬಗ್ಗೆ ತಿಳಿದುಕೊಂಡ ಬಳಿಕ ಅನ್ನಮ್ ತನ್ನ ಯೌವನದ ಉತ್ಸಾಹದೊಂದಿಗೆ ಆಸ್ಪತ್ರೆಗೆ ಬಂದರು.
ಆರೋಗ್ಯ ಅಧಿಕಾರಿಗಳು ಹಿರಿಯ ಮತ್ತಜ್ಜಿಯನ್ನು ಸಂಭ್ರಮದಿಂದಲೇ ಬರಮಾಡಿಕೊಂಡರು. ಮತ್ತು ಶ್ಲಾಘಿಸಿದರು. "ಎಲ್ಲರೂ ಯಾವುದೇ ಹಿಂಜರಿಕೆಯಿಲ್ಲದೆ ಲಸಿಕೆ ಪಡೆಯಬೇಕು" ಎಂದು ಅನ್ನಮ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.