ಪತ್ತನಂತಿಟ್ಟು: ಶಬರಿಮಲೆ ಸನ್ನಿಧಿ ಸಂದರ್ಶನಕ್ಕೆ ವರ್ಚುವಲ್ ಕ್ಯೂ ವ್ಯವಸ್ಥೆಯಡಿ ನೋಂದಾಯಿಸುವ ವ್ಯವಸ್ಥೆಯಲ್ಲಿ 10 ವರ್ಷಕ್ಕಿಂತ ಕೆಳಗಿನ ಕಡಿಮೆ ವಯಸ್ಸಿನ ಬಾಲಕಿಯರ ದಾಖಲೀಕರಣಕ್ಕೆ ಅವಕಾಶ ಇಲ್ಲ ಎಂದು ಆರೋಪಿಸಿ ತಿರುವಾಂಕೂರು ದೇವಸ್ವಂ ಮಂಡಳಿಯನ್ನು ನ್ಯಾಯಾಲಯವು ಅರ್ಜಿಯೊಂದರ ಬಗ್ಗೆ ವಿವರಣೆಯನ್ನು ಕೋರಿದೆ. ಯೋಜನೆಯ ಪ್ರಕಾರ, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರಿಗೆ ಶಬರಿಮಲೆಗೆ ಭೇಟಿ ನೀಡಲು ಅವಕಾಶವಿದೆ. ವೈಕ್ಕಂ ಮೂಲದ ಒಂಬತ್ತು ವರ್ಷದ ನಂದಿತಾ ಎಂಬಳ ತಂದೆ ಅಭಿರಾಜ್ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ಕೋವಿಡ್ ನಿಯಮಗಳ ಪ್ರಕಾರ ಮಕ್ಕಳು ಮತ್ತು ಹಿರಿಯ ನಾಗರಿಕರ ಮೇಲೆ ನಿಬಂಧನೆಗಳಿವೆ ಎಂದು ದೇವಸ್ವಂ ಮಂಡಳಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಮೂರ್ತಿ ಪಿ.ಬಿ.ಸುರೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಕೆ.ಬಾಬು ಅವರನ್ನೊಳಗೊಂಡ ವಿಭಾಗೀಯ ಪೀಠವು ಮುಂದಿನ ಶುಕ್ರವಾರ ಅರ್ಜಿಯನ್ನು ಮರುಪರಿಶೀಲಿಸಲಿದೆ.
ತನ್ನ ಹೆತ್ತವರ ಹರಿಕೆಯ ಅನ್ವಯ ನಂದಿತಾ ಅವರು ಶಬರಿಮಲೆ ದರ್ಶನಕ್ಕಾಗಿ ಹೆಸರನ್ನು ವರ್ಚುವಲ್ ಕ್ಯೂನಲ್ಲಿ ನೋಂದಾಯಿಸಲು ಪ್ರಯತ್ನಿಸಿದ್ದರು. ಏ. 17 ರಂದು ಭೇಟಿಗಾಗಿ ವರ್ಚುವಲ್ ಕ್ಯೂನಲ್ಲಿ ನೋಂದಾಯಿಸಲು ಪ್ರಯತ್ನಿಸಲಾಯಿತು, ಆದರೆ ಮಗುವಿನ ಹೆಸರನ್ನು ನೋಂದಾಯಿಸಲು 10 ವರ್ಷಕ್ಕಿಂತ ಕೆಳಗಿನ ಹರೆಯವೆಂದು ನಿರಾಕರಿಸಲಾಯಿತು. ಹತ್ತು ವರ್ಷ ಕಳೆದ ಬಳಿಕ ಮುಂದೆ ಶಬರಿಮಲೆ ಭೇಟಿ ನೀಡಲು ನಾಲ್ಕು ದಶಕಗಳಷ್ಟು ಕಾಲ ಕಾಯಬೇಕಾಗಿರುವುದರಿಂದ ಮಗುವಿಗೆ ನೋಂದಾಯಿಸಲು ಅವಕಾಶ ನೀಡಲು ಅಭಿರಾಜ್ ವಿನಂತಿಸಿದ್ದಾರೆ.