ಬದಿಯಡ್ಕ: ಬೇಳ ಕೌಮುದಿ ಗ್ರಾಮೀಣ ನೇತ್ರಾಲಯದ ನೇತೃತ್ವದಲ್ಲಿ ಉಚಿತ ಕಣ್ಣು ಪರಿಶೋಧನೆ ಮತ್ತು ಪೆÇೀರೆ ನಿರ್ಣಯ ಶಿಬಿರವು ಏ.11ರಂದು ಭಾನುವಾರ ನಡೆಯಲಿದೆ. ಡಾ. ಎನ್. ಸುನಿಲ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚೆಂಗಳ ಗ್ರಾಮಪಂಚಾಯಿತಿ ಮಾಜಿ ಸದಸ್ಯೆ ಝುಲೈಕಾ ಮಾಹಿನ್ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 1ರ ತನಕ ನಡೆಯಲಿರುವ ಶಿಬಿರದಲ್ಲಿ ಡಾ. ಎನ್. ಸುನಿಲ್ ಮತ್ತು ಡಾ. ಪ್ರಿಯಾ ಎಚ್.ಎಂ. ತಪಾಸಣೆ ನಡೆಸಿ ಮಾಹಿತಿಯನ್ನು ನೀಡಲಿದ್ದಾರೆ. ಭಾಗವಹಿಸಲು ಇಚ್ಚಿಸುವವರು 9446544155,9605425222 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.