ತಿರುವನಂತಪುರ: ತುರ್ತು ಪೋಲೀಸ್ ಸೇವೆಗಳಿಗೆ ಲಭ್ಯವಿರುವ ಟೋಲ್ ಫ್ರೀ ಸಂಖ್ಯೆ 112 ನಲ್ಲಿ ರೈಲ್ವೆ ಪೆÇಲೀಸ್ ಸೇವೆಗಳು ಇನ್ನು ಲಭ್ಯವಾಗಲಿವೆ. 112 ರಾಷ್ಟ್ರವ್ಯಾಪಿ ಏಕೀಕೃತ ಸಂಖ್ಯೆಯಾಗಿದೆ. ಪ್ಲಾಟ್‍ಫಾರ್ಮ್ ಮತ್ತು ರೈಲಿನಲ್ಲಿ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡಲು ಈ ಸೇವೆ ದಿನದ 24 ಗಂಟೆಯೂ ಲಭ್ಯವಿದೆ.
ಕೇರಳ ರೈಲ್ವೆ ಪೋಲೀಸ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವು ರೈಲ್ವೆ ಪೋಲೀಸರ ನೋಡಲ್ ಕಚೇರಿಯಾಗಿದೆ. ಪೋಲೀಸ್ ಪ್ರಧಾನ ಕಚೇರಿಯಲ್ಲಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಇ.ಆರ್.ಎಸ್.ಎಸ್. ಕಮಾಂಡ್ ಸೆಂಟರ್‍ನಲ್ಲಿ ಸಂದೇಶಗಳನ್ನು ತಾಂತ್ರಿಕ ಮತ್ತು ಭಾಷಾ ಪೋಲೀಸ್ ಅಧಿಕಾರಿಗಳು ಕ್ರೋಡೀಕರಿಸುತ್ತಾರೆ. ರಾಜ್ಯ ಪೋಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ಈ ಯೋಜನೆಯನ್ನು ಆನ್‍ಲೈನ್‍ನಲ್ಲಿ ಉದ್ಘಾಟಿಸಿದರು.
ಮುಂದಿನ ಕ್ರಮಕ್ಕಾಗಿ ತಂಬನೂರಿನಲ್ಲಿರುವ ರೈಲ್ವೆ ಪೋಲೀಸ್ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ತಂಬನೂರಿಗೆ ಸ್ಥಳಾಂತರಿಸಲಾಗುತ್ತಿದೆ. ಇದರಿಂದಾಗಿ ಪೋಲೀಸರಿಗೆ ರಾಜ್ಯದ ಯಾವುದೇ ರೈಲ್ವೆ ನಿಲ್ದಾಣವನ್ನು ಅಲ್ಪಾವಧಿಯಲ್ಲಿಯೇ ತಲುಪಲು ಸಾಧ್ಯವಾಗುತ್ತದೆ.