ತಿರುವನಂತಪುರ: ಇಂದಿರಾ ಗಾಂಧಿ ಮುಕ್ತ ವಿಶ್ವ ವಿದ್ಯಾನಿಲಯದ ಎಂ.ಬಿ.ಎ. ಸಹಿತ ಮೇನೇಜ್ಮೆಂಟ್ ವಿಷಯ ಅಧ್ಯಯನ, ಬಿ.ಎಸ್., ಬಿ.ಎಸ್ಸಿ ಪೋಸ್ಟ್ ಪೆÇೀಸ್ಟ್ ಬೇಸಿಕ್ ನಸಿರ್ಂಗ್ ಪ್ರವೇಶ ಪರೀಕ್ಷೆ ಏಪ್ರಿಲ್ 11 ರ ಭಾನುವಾರ ನಡೆಯಲಿದೆ. ಪರೀಕ್ಷೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ. ದೇಶಾದ್ಯಂತ 120 ಕೇಂದ್ರಗಳಲ್ಲಿ ಸುಮಾರು 40,170 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.
ಪರೀಕ್ಷಾ ಕೇಂದ್ರಗಳು ತಿರುವನಂತಪುರ ಪ್ರಾದೇಶಿಕ ಕೇಂದ್ರ ವ್ಯಾಪ್ತಿಯ ಮಾರ್ ಇವಾನಿಯೋಸ್ ಕಾಲೇಜು, ನೆಲಂಚಿರಾ, ಕೊಲ್ಲಂನ ಎಸ್.ಎನ್. ಹಾಲ್ ಪರೀಕ್ಷಾ ಕೇಂದ್ರಗಳಾಗಿವೆ. ಹಾಲ್ ಟಿಕೆಟ್‍ಗಳನ್ನು ಇಗ್ನೋದ ಅಧಿಕೃತ ವೆಬ್‍ಸೈಟ್ www.ignou.ac.in ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. ಪ್ರವೇಶ ಪರೀಕ್ಷೆ ಪ್ರಾರಂಭವಾಗುವ 45 ನಿಮಿಷಗಳ ಮೊದಲು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ವರದಿ ಸಲ್ಲಿಸಬೇಕಾಗುತ್ತದೆ. ಪರೀಕ್ಷಾ ಕೇಂದ್ರವನ್ನು ಬದಲಾಯಿಸುವ ಕೋರಿಕೆಯನ್ನು ಸ್ವೀಕರಿಸಲಾಗುವುದಿಲ್ಲ.
ಹಾಲ್ ಟಿಕೆಟ್ ಡೌನ್‍ಲೋಡ್ ಮಾಡಲು ಸಾಧ್ಯವಾಗದವರು ತಿರುವನಂತಪುರ ಪ್ರಾದೇಶಿಕ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ತಿಳಿಸಲಾಗಿದೆ.