HEALTH TIPS

ಟಾಟಾ ಕೋವಿಡ್ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ ಹೆಚ್ಚವರಿ 150 ಬೆಡ್ ಗಳ ಸಜ್ಜೀಕರಣ

                                               

             ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಹಾವಳಿ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಟಾಟಾ ಕೋವಿಡ್ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ ಹೆಚ್ಚುವರಿ 150 ಬೆಡ್ ಗಳ ಸಜ್ಜೀಕರಣ ನಡೆಸಲಾಗುವುದು ಎಂದು ಜಿಲ್ಲಾ ವೈದ್ಯಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

             ಸದ್ರಿ 200 ಮಂದಿಗೆ ದಾಖಲಾತಿ ಚಿಕಿತ್ಸೆ ನೀಡುವ ಸೌಲಭ್ಯ ಇಲ್ಲಿದೆ. ಆಸ್ಪತ್ರೆ ಆರಂಭಗೊಂಡ ನಂತರ ಈ ವರೆಗೆ 1410 ಮಂದಿ ಕೋವಿಡ್ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ 110 ಮಂದಿ ಗುಣಮುಖರಾಗಿದ್ದಾರೆ. ಗಂಭೀರ ಸ್ಥಿತಿಯ ಶ್ರೇಣಿಯ ಬಿ,ಸಿ, ರೋಗಿಗಳಿಗೆ ಪ್ರಧಾನವಾಗಿ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. 12 ಐ.ಸಿ.ಯು. ಬೆಡ್ ಗಳೂ, ಸುಮಾರು 70 ಸೆಂಟ್ರಲೈಸ್ ಡ್ ಪೈಪ್ ಲೈನ್ ಸೌಲಭ್ಯಗಳ ಸಹಿತ ಬೆಡ್ ಗಳು ಇಲ್ಲಿವೆ. ಈಗಾಗಲೇ 70 ಮಂದಿ ಗಂಭೀರ ಸ್ಥಿತಿಯ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಒಂದು ಕಂಟೈನರ್ ನಲ್ಲಿ 4 ಬೆಡ್ ಎಂಬ ರೀತಿಯಲ್ಲಿ 540 ಮಮದಿಗೆ ದಾಖಲಾತಿ ಚಿಕಿತ್ಸೆ ಸೌಲಭ್ಯಗಳಿವೆ. ಆದರೆ ಕಚೇರಿ ಸೌಲಭ್ಯ, ಪ್ರಯೋಗಾಲಯ, ಫಾರ್ಮಸಿ, ಫಾರ್ಮಸಿ ಸ್ಟೋರ್ ಸಿಬ್ಬಂದಿಗೆ ವಸತಿಗಾಗಿ ಕಂಟೈನರ್ ಮೀಸಲಿರಿಸುವ ಕಾಯಕ ಬಾಕಿಯುಳಿದಿದೆ. ಐ.ಸಿ.ಯು. ವಾರ್ಡ್ ಗಳು ಸಜ್ಜೀಕರಿಸುವ ವೇಳೆ ಒಂದು ಕಂಟೈನರ್ ನಲ್ಲಿ 3  ಬೆಡ್ ಗಳು ಮಾತ್ರ ಸಜ್ಜುಗೊಳಿಸಲು ಸಾಧ್ಯ. ಬೆಡ್ ಗಳ ಅಂತರ ಇನ್ ಪೆಕ್ಷನ್ ಕಂಟ್ರೋಲರ್ ನ ಹಿನ್ನೆಲೆಯಲ್ಲಿ ಸಜ್ಜುಗೊಳಿಸಲಾಗುತ್ತದೆ. ಇದೆಲ್ಲವನ್ನೂ ಪರಿಶೀಲಿಸಿ 150 ಬೆಡ್ ಗಳನ್ನು ಹೆಚ್ಚುವರಿಯಾಗಿ ಸಜ್ಜುಗೊಳಿಸಲು ತೀರ್ಮಾನಿಸಲಾಗಿದೆ. ಆಸ್ಪತ್ರೆಯ ನೀರು, ವಿದ್ಯುತ್ ಇತ್ಯಾದಿಗಳ ಲಭ್ಯತೆಗೆ ವಿಳಂಬವಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries