HEALTH TIPS

ರಾಮ ಮಂದಿರ ದೇಣಿಗೆಯ 15,000 ಚೆಕ್ ಬೌನ್ಸ್ !

          ಅಯೋಧ್ಯೆ : ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ ಸಂಗ್ರಹಿಸಿದ್ದ 15,000 ಚೆಕ್​ಗಳು ಬೌನ್ಸ್ ಆಗಿವೆ. ಇದರ ಒಟ್ಟು ಮೌಲ್ಯ 22 ಕೋಟಿ ರೂಪಾಯಿ ಎಂಬ ಅಂಶ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಆಡಿಟ್ ವರದಿಯಲ್ಲಿ ಬಹಿರಂಗವಾಗಿದೆ. ಬಹುತೇಕ ಚೆಕ್​ಗಳು ಖಾತೆಯಲ್ಲಿ ಕಡಿಮೆ ಮೊತ್ತ ಇದ್ದ ಕಾರಣ ಬೌನ್ಸ್ ಆಗಿದ್ದವು. ಇನ್ನು ಉಳಿದವು ತಾಂತ್ರಿಕ ದೋಷದ ಕಾರಣ ಬೌನ್ಸ್ ಆಗಿವೆ.


       ಚೆಕ್ ನೀಡಿದವರನ್ನು ಸಂರ್ಪಸಿ ಮತ್ತೊಮ್ಮೆ ಚೆಕ್ ನೀಡಿ ದೇಣಿಗೆ ಪಾವತಿಸುವಂತೆ ಬ್ಯಾಂಕುಗಳು ಹೇಳತೊಡಗಿವೆ. ಈ ಕೆಲಸ ಪ್ರಗತಿಯಲ್ಲಿದೆ ಎಂದು ಟ್ರಸ್ಟ್​ನ ಸದಸ್ಯ ಡಾ.ಅನಿಲ್ ಮಿಶ್ರಾ ತಿಳಿಸಿದ್ದಾರೆ. ಬೌನ್ಸ್ ಆದ ಚೆಕ್​ಗಳ ಪೈಕಿ 2,000ದಷ್ಟು ಚೆಕ್​ಗಳು ಅಯೋಧ್ಯೆಯಿಂದಲೇ ಸಂಗ್ರಹಿಸಿದ್ದಾಗಿದೆ. ವಿಶ್ವ ಹಿಂದು ಪರಿಷದ್ (ವಿಹಿಂಪ) ಜನವರಿ 15ರಿಂದ ಫೆಬ್ರವರಿ 17ರ ತನಕ ದೇಣಿಗೆ ಸಮರ್ಪಣೆ ಕಾರ್ಯ ನಡೆಸಿತ್ತು. ಅಂದಾಜು 5,000 ಕೋಟಿ ರೂಪಾಯಿಯನ್ನು ಈ ಅಭಿಯಾನದಲ್ಲಿ ಸಂಗ್ರಹಿಸಲಾಗಿದೆ. ಅಂತಿಮ ಲೆಕ್ಕಾಚಾರ ಇನ್ನೂ ಬಹಿರಂಗವಾಗಿಲ್ಲ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries