ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ಮಠ ಶ್ರೀಶಂಕರನಾರಾಯಣ ದೇವಸ್ಥಾನದ ವಾರ್ಷಿಕ ಉತ್ಸವವು ಏ.18 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅಂದು ಬೆಳಿಗ್ಗೆ 7.30ರಿಂದ ಬೆಳಿಗ್ಗಿನ ಪೂಜೆ, 8.30 ರಿಂದ ಗಣಪತಿ ಹವನ, ಏಕಾದಶ ರುದ್ರಾಭಿಷೇಕ, 10 ರಿಂದ ಪುಟಾಣಿಗಳಿಂದ ಭಕ್ತಿಗೀತೆಗಳು, 11 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಪೆರ್ಲ ಇಡಿಯಡ್ಕ ಶ್ರೀವಿಷ್ಣುಮೂರ್ತಿ,ಉಳ್ಳಾಲ್ತಿ ಕ್ಷೇತ್ರದ ಕಾರ್ಯದರ್ಶಿ ಸದಾನಂದ ಶೆಟ್ಟಿ ಕುದ್ವ, ಬಳ್ಳಂಬೆಟ್ಟು ಶ್ರೀಕ್ಷೇತ್ರದ ಮೊಕ್ತೇಸರ ಲಕ್ಷ್ಮೀನಾರಾಯಣ ಪೈ ಉಪಸ್ಥಿತರಿರುವರು.
ಮಧ್ಯಾಹ್ನ 12.30 ರಿಂದ ದ್ವಿವ್ಯಕ್ತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಶ್ರೀದೇವಿ ಮಹಾತ್ಮ್ಯೆ ಪ್ರಸಂಗದ ಚಂಡ-ಮುಂಡ ಕಥಾನಕದ ಅವತರಣಿಕೆಯಲ್ಲಿ ಕಿಶನ್ ಅಗ್ಗಿತ್ತಾಯ ಹಾಗೂ ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ ಪ್ರಸ್ತುತಪಡಿಸುವರು.
ಸಂಜೆ 7 ರಿಂದ ಕುಂಟಿಕಾನ ಮಠ ಶ್ರೀಅನ್ನಪೂರ್ಣೇಶ್ವರಿ ಭಜನಾ ತಂಡದಿಂದ ಭಜನೆ, ರಾತ್ರಿ 8ಕ್ಕೆ ವಿಶೇಷ ಕಾರ್ತಿಕ ಪೂಜೆ ನೆರವೇರಲಿದೆ. ಏ.19 ರಂದು ಸೋಮವಾರ ರಾತ್ರಿ 8 ರಿಂದ ಶ್ರೀದೈವಗಳ ತೊಡಂಙಲ್, ಅನ್ನಸಂತರ್ಪಣೆ ನಡೆಯಲಿದೆ. ಏ.20 ರಂದು ಬೆಳಿಗ್ಗೆ 6 ರಿಂದ 12ರ ವರೆಗೆ ಶ್ರೀಉಳ್ಳಾಕ್ಲು ಹಾಗೂ ಧೂಮಾವತಿ ದೈವಗಳ ಕೋಲ, ಪ್ರಸಾದ ವಿತರಣೆ ನಡೆಯಲಿದೆ.