ತಿರುವನಂತಪುರ: ರಾಜ್ಯದಲ್ಲಿ ಇಂದು ಕೊರೊನಾ ಸ್ಪೋಟ ಸಂಭವಿಸಿದ್ದು ಕಳೆದೊಂದು ವರ್ಷದ ಅವಧಿಯಲ್ಲಿ ಇದೇ ಮೊದಲ ಬಾರಿಗೆ 18,257 ಜನರಿಗೆ ಇಂದು ಕೋವಿಡ್ ಸೋಂಕು ಖಚಿತವಾಗಿದೆ.ವಿಧಾನ ಸಭಾ ಚುನಾವಣೆಯ ಅನಿಯಂತ್ರಿತ ಬೇಜವಾಬ್ದಾರಿ ಕ್ರಮಗಳು ಇದಕ್ಕೆ ಕಾರಣವೆಂದು ಹೇಳಲು ಅಡ್ಡಿಯಿಲ್ಲ! ಇಂದು ಎರ್ನಾಕುಳಂ 2835, ಕೋಝಿಕೋಡ್ 2560, ತ್ರಿಶೂರ್ 1780, ಕೊಟ್ಟಾಯಂ 1703, ಮಲಪ್ಪುರಂ 1677, ಕಣ್ಣೂರು 1451, ಪಾಲಕ್ಕಾಡ್ 1077, ತಿರುವನಂತಪುರ 990, ಕೊಲ್ಲಂ 802, ಆಲಪ್ಪುಳ 800, ಇಡುಕ್ಕಿ 682, ಪತ್ತನಂತಿಟ್ಟು 673, ಕಾಸರಗೋಡು 622, ವಯನಾಡು 605 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಗುಂಪು ಪರೀಕ್ಷೆಯ ಭಾಗವಾಗಿ ರಾಜ್ಯದ ವಿವಿಧ ಭಾಗಗಳಿಂದ ಶುಕ್ರವಾರ ಮತ್ತು ಶನಿವಾರದಂದು ಒಟ್ಟು 3,00,971 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 1,08,898 ಮಾದರಿಗಳನ್ನು ಪರೀಕ್ಷಿಸಲಾಯಿತು. ಉಳಿದ ಮಾದರಿಗಳ ಪರೀಕ್ಷಾ ಫಲಿತಾಂಶಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಪರೀಕ್ಷಾ ಸಕಾರಾತ್ಮಕ ದರ ಶೇ. 16.77 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಐಂಒP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,42,71,741 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್‍ನ ಯಾರೂ ಕೋವಿಡ್ ನ್ನು ಖಚಿತಪಡಿಸಿಲ್ಲ. ಕೋವಿಡ್ 19 ಅನ್ನು ಯುಕೆ (105), ದಕ್ಷಿಣ ಆಫ್ರಿಕಾ (7) ಮತ್ತು ಬ್ರೆಜಿಲ್ (1) ರಂತೆ ಒಟ್ಟು 113 ಜನರಿಗೆ ಈವರೆಗೆ ಸೋಂಕು ದೃಢಪಡಿಸಲಾಗಿದ್ದು ಈ ಪೈಕಿ 112 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಟ್ಟ ವೈರಸ್ ಇರುವುದು ಪತ್ತೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 25 ಮಂದಿ ಸೋಂಕು ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಮೃತರಾದವರ ಸಂಖ್ಯೆ 4929 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 269 ಮಂದಿ ಜನರು ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ ಒಟ್ಟು 16,762 ಮಂದಿ ಜನರಿಗೆ ಸೋಂಕು ತಗಲಿತು. 1159 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 2741, ಕೋಝಿಕೋಡ್ 2512, ತ್ರಿಶೂರ್ 1747, ಕೊಟ್ಟಾಯಂ 1530, ಮಲಪ್ಪುರಂ 1597, ಕಣ್ಣೂರು 1273, ಪಾಲಕ್ಕಾಡ್ 512, ತಿರುವನಂತಪುರ 782, ಕೊಲ್ಲಂ 796, ಆಲಪ್ಪುಳ 793, ಇಡುಕ್ಕಿ 656, ಪತ್ತನಂತಿಟ್ಟು 630, ಕಾಸರಗೋಡು 602, ವಯನಾಡ್ 591 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು ಅರವತ್ತೇಳು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕೊಟ್ಟಾಯಂ 25, ಕಣ್ಣೂರು 14, ವಯನಾಡ್ ಮತ್ತು ಕಾಸರಗೋಡು ತಲಾ 6, ಎರ್ನಾಕುಳಂ ಮತ್ತು ತ್ರಿಶೂರ್ ತಲಾ 3, ತಿರುವನಂತಪುರ, ಕೊಲ್ಲಂ, ಇಡಕ್ಕಿ, ಪಾಲಕ್ಕಾಡ್ ತಲಾ 2, ಪತ್ತನಂತಿಟ್ಟು ಮತ್ತು ಕೋಝಿಕೋಡ್ ತಲಾ 1 ಎಂಬಂತೆ ಸೋಂಕು ಕಂಡುಬಂದಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4565 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 651, ಕೊಲ್ಲಂ 256, ಪತ್ತನಂತಿಟ್ಟು 165, ಆಲಪ್ಪುಳ 387, ಕೊಟ್ಟಾಯಂ 316, ಇಡುಕ್ಕಿ 70, ಎರ್ನಾಕುಳಂ 355, ತ್ರಿಶೂರ್ 428, ಪಾಲಕ್ಕಾಡ್ 172, ಮಲಪ್ಪುರಂ 247, ಕೋಝಿಕ್ಕೋಡ್ 564, ವಯನಾಡ್ 86, ಕಣ್ಣೂರು 714, ಕಾಸರಗೋಡು 154 ಎಂಬಂರೆಡ ನೆಗೆಟಿವ್ ಆಗಿದೆ. ಇದರೊಂದಿಗೆ 93,686 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 11,40,486 ಮಂದಿ ಜನರನ್ನು ಕೋವಿಡ್ ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,37,036 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 2,25,683 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆಯನ್ನು ಮತ್ತು 11,353 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 1916 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು 10 ಹೊಸ ಹಾಟ್‍ಸ್ಪಾಟ್‍ಗಳಿವೆ. 2 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 460 ಹಾಟ್‍ಸ್ಪಾಟ್‍ಗಳಿವೆ.