ನವದೆಹಲಿ: ಭಾರತದಲ್ಲಿ ಏಪ್ರಿಲ್ ಮಧ್ಯಭಾಗದಲ್ಲಿ ಕೋವಿಡ್-19 ಸೋಂಕಿನ ಅಲೆ ಉತ್ತುಂಗ ಸ್ಥಿತಿಯಲ್ಲಿರುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಗಣಿತ ಮಾದರಿಯೊಂದನ್ನು ಬಳಸಿಕೊಂಡು ವಿಜ್ಞಾನಿಗಳು ಈ ವಿಶ್ಲೇಷಣೆ ಮಾಡಿದ್ದು, COVID-19 ಸಾಂಕ್ರಾಮಿಕ ರೋಗವು ಏಪ್ರಿಲ್ ಮಧ್ಯದ ವೇಳೆಗೆ ಭಾರತದಲ್ಲಿ ಉತ್ತುಂಗ ಸ್ಥಿತಿ ತಲುಪಿರುತ್ತದೆ. ಆಗ ಹೊಸ ಸೋಂಕಿತರ ಸಂಖ್ಯೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಗರಿಷ್ಠವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೂತ್ರ (SUTRA) ಎಂಬ ಗಣಿತದ ನಿಯಮವನ್ನು ಅಧಾರವಾಗಿಟ್ಟುಕೊಂಡು ಮೊದಲ ಅಲೆಯನ್ನು ಅಧ್ಯಯನ ಮಾಡಿದ್ದ ವಿಜ್ಞಾನಿಗಳು ಇದೇ ಸೂತ್ರದ ಆಧಾರದ ಮೇಲೆ 2ನೇ ಅಲೆಯ ಕುರಿತು ಭವಿಷ್ಯ ನುಡಿದಿದ್ದಾರೆ. ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮನೀಂದ್ರ ಅಗರ್ವಾಲ್ ಸೇರಿದಂತೆ ಹಲವು ವಿಜ್ಞಾನಿಗಳು ಈ ಕುರಿತು ಅಧ್ಯಯನ ನಡೆಸಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಕಾನ್ಪುರದ ಮನೀಂದ್ರ ಅಗ್ರವಾಲ್ ಸೇರಿದಂತೆ ವಿಜ್ಞಾನಿಗಳು ಈ ಕುರಿತ ಅಧ್ಯಯನ ನಡೆಸಿದ್ದಾರೆ.
'ದೇಶದಲ್ಲಿ ಮೊದಲ ಅಲೆ 2020ರ ಆಗಸ್ಟ್ ನಲ್ಲಿ ಆರಂಭವಾಗಿ ಸೆಪ್ಟೆಂಬರ್ ನಲ್ಲಿ ಉತ್ತುಂಗ ಸ್ಥಿತಿಯಲ್ಲಿತ್ತು. ಬಳಿಕ 2021ರ ಫೆಬ್ರವರಿಯಲ್ಲಿ ಅಂತ್ಯ ಅಥವಾ ಕಡಿಮೆಯಾಗಿತ್ತು. ಅಂತೆಯೇ 2ನೇ ಅಲೆ ಕೂಡ ಇದೀಗ ಹೆಚ್ಚಾಗುತ್ತಿದ್ದು, ಏಪ್ರಿಲ್ 15-20ರ ನಡುವೆ ಇದು ಉತ್ತುಂಗ ಸ್ಥಿತಿಗೇರಲಿದೆ. ಬಳಿಕ ಮೇ ತಿಂಗಳ ಅಂತ್ಯದ ವೇಳೆಗೆ ಸೋಂಕು ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಗರ್ವಾಲ್ ಹೇಳಿದರು.
2ನೇ ಅಲೆ ಆರಂಭದಲ್ಲಿ ಪಂಜಾಬ್ ನಲ್ಲಿ ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಬಳಿಕ ಮಹಾರಾಷ್ಟ್ರದಲ್ಲಿ ಸೋಂಕು ಪ್ರಕರಣಗಳು ಗಣನೀಯ ಏರಿಕೆ ಕಂಡವು. ಬಳಿಕ ಗುಜರಾತ್, ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಸೋಂಕು ಏರುಗತಿಯಲ್ಲಿದೆ. ಭವಿಷ್ಯದಲ್ಲಿ ದೇಶದಲ್ಲಿ ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆ 1 ಲಕ್ಷ ಗಡಿಯತ್ತ ಸಾಗಬಹುದು. ದೇಶದಲ್ಲಿ ಮೊದಲ ಅಲೆ 2020ರ ಆಗಸ್ಟ್ ನಲ್ಲಿ ಆರಂಭವಾಗಿ ಸೆಪ್ಟೆಂಬರ್ ನಲ್ಲಿ ಉತ್ತುಂಗ ಸ್ಥಿತಿಯಲ್ಲಿತ್ತು. ಬಳಿಕ 2021ರ ಫೆಬ್ರವರಿಯಲ್ಲಿ ಅಂತ್ಯ ಅಥವಾ ಕಡಿಮೆಯಾಗಿತ್ತು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 81,466 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಇದು 2020 ರ ಅಕ್ಟೋಬರ್ 2 ರ ನಂತರದ ಬಳಿಕ ದಾಖಲಾದ ಒಂದು ದಿನದ ಗರಿಷ್ಠ ಸೋಂಕು ಪ್ರಕರಣಗಳಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.