ನವದೆಹಲಿ: ಓರ್ವ ಕೋವಿಡ್-19 ಸೋಂಕಿತ ವ್ಯಕ್ತಿ 400 ಮಂದಿಗೆ ವೈರಾಣುವನ್ನು ಹರಡಬಲ್ಲ ಎಂದು ಮಹಾರಾಷ್ಟ್ರದ ಕೋವಿಡ್-19 ಟಾಸ್ಕ್ ಫೋತ್ಸ್ ನ ಡಾ.ಸಂಜಯ್ ಓಕ್ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದನ್ನು ಬಿಟ್ಟರೆ ಬೇರೆ ಮಾರ್ಗಗಳಿಲ್ಲ ಎಂದು ಓಕ್ ಅಭಿಪ್ರಾಯಪಟ್ಟಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿರುವ ಅವರು, ಸಾಮಾನ್ಯ ಶೀತ, ಸಣ್ಣ ಪ್ರಮಾಣದ ಮೈಕೈ ನೋವು, ಹಾಗೂ ಆಯಾಸಗಳು ಕೋವಿಡ್-19 ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ರೋಗ ಲಕ್ಷಣವಾಗಿದೆ ಎಂದು ಓಕ್ ಮಾಹಿತಿ ನೀಡಿದ್ದಾರೆ.
ಕೊರೋನಾ ಸಾಮಾನ್ಯವಾಗಿ ಮೂಗಿನ ಮೂಲಕ ಹರಡುತ್ತದೆ. ಓರ್ವ ಕೊರೋನಾ ಸೋಂಕಿತ ಕನಿಷ್ಟ 400 ಮಂದಿಗೆ ಸೋಂಕನ್ನು ಹರಡಬಲ್ಲ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದಷ್ಟೇ ಇದಕ್ಕೆ ಇರುವ ಪರಿಹಾರ ಎನ್ನುತ್ತಾರೆ ಓಕ್.