ಕೊಟ್ಟಾಯಂ: ಕಾಂಜಿರಪಳ್ಳಿ ಅಗ್ನಿಶಾಮಕ ಕೇಂದ್ರದಲ್ಲಿ ಕೋವಿಡ್ ವ್ಯಾಪಕವಾಗಿ ಹರಡಿದ್ದು ಒಟ್ಟು 45 ಉದ್ಯೋಗಿಗಳಲ್ಲಿ 38 ಮಂದಿಗೆ ದೃಢ¥ಟ್ಟಿದೆ. ಉಳಿದ ಏಳು ಉದ್ಯೋಗಿಗಳ ಪರೀಕ್ಷಾ ಫಲಿತಾಂಶಗಳು ಶೀಘ್ರದಲ್ಲೇ ಲಭ್ಯವಾಗಲಿದೆ. ಇವರಲ್ಲಿ ಕೆಲವರು ಈಗಾಗಲೇ ರೋಗಲಕ್ಷಣಗಳನ್ನು ಹೊಂದಿದ್ದಾರೆಂದು ವರದಿಯಾಗಿದೆ.
ಇದರೊಂದಿಗೆ ಅಗ್ನಿಶಾಮಕ ಕೇಂದ್ರವನ್ನು ಮುಚ್ಚಲಾಯಿತು. ಕೊಟ್ಟಾಯಂನಿಂದ ನೌಕರರನ್ನು ಕರೆತರಲು ಮತ್ತು ತಾತ್ಕಾಲಿಕ ಅಗ್ನಿಶಾಮಕ ಘಟಕವನ್ನು ಪ್ರಾರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಗ್ನಿಶಾಮಕ ಕೇಂದ್ರವು ಪ್ರಸ್ತುತ ಐದು ಜನರಿಂದ ಕಾರ್ಯನಿರ್ವಹಿಸುತ್ತಿದೆ. ಕೇಂದ್ರದ ಕಾರ್ಯಚಟುವಟಿಕೆಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಇದೇ ವೇಳೆ ಕೋವಿಡ್ ಸೋಂಕು ಅಗ್ನಿ ಶಾಮಕ ಕೇಂದ್ರಕ್ಕೆ ಹೇಗೆ ಮತ್ತು ಇಷ್ಟು ದೊಡ್ಡ ಪ್ರಮಾಣದಲ್ಲಿ ಹgಡಲು ಕಾರಣವೇನೆಂದು ಸ್ಪಷ್ಟವಾಗಿಲ್ಲ. ಕಳೆದ ಕೆಲವು ದಿನಗಳಲ್ಲಿ ಅನೇಕರಿಗೆ ಸೋಂಕು ಪತ್ತೆಯಾಗಿದೆ.