ಬೀಜಿಂಗ್: ಈ ವರೆಗೂ ಜಾಗತಿಕ ಮಟ್ಟದಲ್ಲಿ ತನ್ನದೆಲ್ಲವೂ ಶ್ರೇಷ್ಠ ಎಂದೇ ಹೇಳಿಕೊಂಡು ಬರುತ್ತಿದ್ದ ಚೀನಾ ಈಗ ಕೋವಿಡ್-19 ಲಸಿಕೆ ವಿಷಯದಲ್ಲಿ ತನ್ನ ಹಿನ್ನೆಡೆಯನ್ನು ಒಪ್ಪಿಕೊಂಡಿದೆ.
ದೇಶದ ಅತ್ಯುನ್ನತ ರೋಗ ನಿಯಂತ್ರಕ ಸಂಸ್ಥೆಯ ಅಧಿಕಾರಿ ಕೋವಿಡ್-19 ಲಸಿಕೆಗಳ ಪರಿಣಾಮಕಾರಿತ್ವ ಕಡಿಮೆ ಇರುವುದನ್ನು ಒಪ್ಪಿಕೊಂಡಿದ್ದು, ಸರ್ಕಾರ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಹೇಳಿದ್ದಾರೆ.
ಚೀನಾ ಲಸಿಕೆಗಳು ಅತಿ ಹೆಚ್ಚು ಸುರಕ್ಷತಾ ಪ್ರಮಾಣಗಳನ್ನು ಹೊಂದಿಲ್ಲ ಎಂದು ಚೀನಾದ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಗಾವೊ ಫೂ ಹೇಳಿದ್ದಾರೆ.
ಬೀಜಿಂಗ್ ಈಗಾಗಲೇ ತನ್ನ ಲಸಿಕೆಯ ನೂರಾರು ಮಿಲಿಯನ್ ಡೋಸ್ ಗಳನ್ನು ವಿದೇಶಗಳಿಗೆ ರವಾನೆ ಮಾಡಿದೆ.
ರೋಗನಿರೋಧಕ ಪ್ರಕ್ರಿಯೆಗಾಗಿ ನಾವು ಈಗ ಬೇರೆ ಅಸಿಕೆಗಳನ್ನು ಬೇರೆ ತಾಂತ್ರಿಕ ಮಾರ್ಗಗಳಿಂದ ಬಳಸಬೇಕೆ? ಎಂಬುದನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ಗಾವೊ ಫೂ ಹೇಳಿದ್ದಾರೆ. ಆದರೆ ಚೀನಾ ಅಧಿಕಾರಿಗಳು ಗಾವೊ ಫೂ ಅವರ ಹೇಳಿಕೆಗೆ ತಕ್ಷಣ ಪ್ರತಿಕ್ರಿಯೆ ನೀಡಿಲ್ಲ. ಹೆಚ್ಚಿನ ಪ್ರತಿಕ್ರಿಯೆ ನೀಡಲು ಗಾವೊ ದೂರವಾಣಿ ಸಂಪರ್ಕಕ್ಕೂ ಸ್ಪಂದಿಸುತ್ತಿಲ್ಲ ಎಂದು ಮಾಧ್ಯಮಗಳು ವರದಿ ಪ್ರಕಟಿಸಿವೆ.