ಕಾಸರಗೋಡು : ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ 19 ರೋಗಿಗಳು ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ನಿಟ್ಟಿನಲ್ಲಿ ಏ.16,17ರಂದು ಕೋವಿಡ್ -19 ಮೆಗಾ ಟೆಸ್ಟಿಂಗ್ ಡ್ರೈವ್ ನಡೆಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಇದರ ಅಂಗವಾಗಿ ಈ ಎರಡೂ ದಿನ 6 ಸಾವಿರ ಮಂದಿಗೆ ಕೋವಿಡ್ 19 ಟೆಸ್ಟಿಂಗ್ ನಡೆಸಲಾಗುವುದು. ಇದಕ್ಕಿರುವ ಸಿದ್ಧತೆ ಜಿಲ್ಲೆಯಲ್ಲಿ ನಡೆಸಲಾಗಿದೆ. ಜಿಲ್ಲೆಯಲ್ಲಿ ಶಾಶ್ವತವಾಗಿ ಕೋವಿಡ್ -19 ಟೆಸ್ಟಿಂಗ್ ನಡೆಸಲಾಗುತ್ತಿರುವ ಸರಕಾರಿ ಆಸ್ಪತ್ರೆಗಳಲ್ಲೂ ಕೋವಿಡ್ 19 ತಪಾಸಣೆ ಇರುವುದು. ಏ.16ರಂದು ವೆಳ್ಳರಿಕುಂಡ್ ತಾಲೂಕು ಕಚೇರಿಉಯಲ್ಲೂ, ಏ.17ರಂದು ಪಡನ್ನಕ್ಕಾಡು ಇ.ಎಂ.ಎಸ್.ಕ್ಲಬ್, ಮಡಕ್ಕರ ಹಾರ್ಬರ್ ಗಳಲ್ಲೂ ತಪಾಸಣೆಯ ಸೌಲಭ್ಯಗಳಿರುವುವು. ಕೋವಿಡ್ 19 ರೋಗ ಲಕ್ಷಣ ಹೊಂದಿರುವವರು, ರೋಗಿಗಳ ಸಂಪರ್ಕ ಹೊಂದಿರುವವರು, ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿರತುವ 45 ವರ್ಷಕ್ಕಿಂತ ಕೆಳಗಿನ ವಯೋಮಾನದ ಆಟೋ-ಟಾಕ್ಸಿ ಚಾಲಕರು, ಕಲೆಕ್ಷನ್ ಏಜೆಂಟರುಇ ಮೊದಲಾದವರು, ಕೋವಿಡ್ 19 ವಾಕ್ಸಿನೇಷನ್ ಪಡೆಯದೇ ಇರುವ 45 ವರ್ಷಕ್ಕಿಂತ ಅಧಿಕ ವಯೋಮಾನದ ಮಂದಿ, ಚುನಾವಣೆ ಅಂಗವಾಗಿ ಚಟುವಟಿಕೆ ನಡೆಸಿರುವವರು, ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಆಗಮಿಸುವ ರೋಗಿಗಳು, ಜತೆಗಿರುವವರು ಮೊದಲಾದವರು ಈ ಕೇಂದ್ರಗಳಿಗೆ ತೆರಳಿ ತಪಾಸಣೆಗೆ ಒಳಗಾಗುವಂತೆ ವೈದ್ಯಾಧಿಕಾರಿ ತಿಳಿಸಿದರು.