HEALTH TIPS

ಕಡಿಮೆ ಸಂಪರ್ಕ ಪತ್ತೆ, ಸಂಪನ್ಮೂಲಗಳ ಕೊರತೆಯಿಂದ ಮಹಾರಾಷ್ಟ್ರದಲ್ಲಿ ಕೋವಿಡ್-19 ನಿಯಂತ್ರಣ ವಿಫಲ: ಕೇಂದ್ರ

        ಮುಂಬೈ: ಕೊರೋನಾ ಸೋಂಕು ಪ್ರಸರಣ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ನಿಯೋಜಿಸಲಾಗಿರುವ ಕೇಂದ್ರ ತಂಡ ತನ್ನ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ರವಾನೆ ಮಾಡಿದೆ.

       ಸತಾರ, ಸಂಗ್ಲಿ ಹಾಗೂ ಔರಂಗಾಬಾದ್ ಜಿಲ್ಲೆಗಳಲ್ಲಿ ಕೊರೋನಾ ಕಂಟೈನ್ಮೆಂಟ್ ಕಾರ್ಯಾಚರಣೆಗಳು ಸೂಕ್ತವಾಗಿಲ್ಲ. ಕೋವಿಡ್-19 ಹೆಚ್ಚಳವಾಗದಂತೆ ತಡೆಯುವುದಕ್ಕೆ ನಿಯಂತ್ರಣ (perimeter control) ಸಮಾಧಾನಕರವಾಗಿಲ್ಲ ಹಾಗೂ ಕಡಿಮೆ ನಿಗಾ ವಹಿಸುತ್ತಿರುವುದು ಮಹಾರಾಷ್ಟ್ರವನ್ನು ಬಾಧಿಸುತ್ತಿದೆ ಎಂದು ಕೇಂದ್ರ ತಂಡ ಆರೋಗ್ಯ ಸಚಿವಾಲಯಕ್ಕೆ ಕಳಿಸಿದ ವರದಿಯಲ್ಲಿ ತಿಳಿಸಿದೆ.

        ಕಡಿಮೆ ಮಾನವ ಸಂಪನ್ಮೂಲ ಬಳಕೆಯಿಂದಾಗಿ ಬುಲ್ದಾನ, ಸತಾರಾ, ಔರಂಗಾವಾದ್, ನನ್ದೆದ್ ಗಳಲ್ಲಿ ನಿಗಾ ವಹಿಸುವುದು ಹಾಗೂ ಕೋವಿಡ್-19 ಸೋಂಕಿತರ ಸಂಪರ್ಕ ಪತ್ತೆಯಲ್ಲಿ ವಹಿಸುತ್ತಿರುವ ಶ್ರಮ ಸೂಕ್ತವಾಗಿಲ್ಲ, ಹೆಚ್ಚಿನ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗುತ್ತಿರುವುದು ಕಂಟೈನ್ಮೆಂಟ್ ಜೋನ್ ಗಳಿಂದ ಹೊರಭಾಗದಲ್ಲಿ ಎಂದು ವರದಿ ಹೇಳಿದೆ.

      ಮಹಾರಾಷ್ಟ್ರದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ವ್ಯಾಸ್ ಅವರನ್ನುದ್ದೇಶಿಸಿ ಹೇಳಿರುವ ವರದಿಯಲ್ಲಿ ಸಚಿವಾಲಯ, ಕೋವಿಡ್-19 ನ್ನು ಎದುರಿಸುವುದಕ್ಕೆ ಹಾಗೂ ಪ್ರತಿಕ್ರಿಯಾತ್ಮಕವಾಗಿ ನಡೆದುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಸಹಕರಿಸುತ್ತಿದೆ ಎಂದು ಹೇಳಿದೆ. ಮಹಾರಾಷ್ಟ್ರದಲ್ಲಿ ಕೋವಿಡ್-19 ಪೀಡಿತ 30 ಜಿಲ್ಲೆಗಳಿಗೆ ಕೇಂದ್ರ ತಂಡ ತೆರಳಿದ್ದು, ಜಿಲ್ಲಾಡಳಿತದೊಂದಿಗೆ ಕೆಲಸ ಮಾಡುತ್ತಿದೆ.

         ಸತಾರದಲ್ಲಿ ಕೋವಿಡ್-19 ಸೋಂಕುರೋಗಿಗಳು ತಡವಾಗಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಅಹ್ಮದ್ ನಗರ, ಔರಂಗಾಬಾದ್, ನಾಗ್ಪುರ, ನಂದುರ್ಬಾರ್ ಜಿಲ್ಲೆಗಳಲ್ಲಿ ಲಭ್ಯವಿರುವ ಬೆಡ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪ್ರಮಾಣ ಹೆಚ್ಚಿದೆ. ಪಾಲ್ಖರ್, ಉಸ್ಮಾನಾಬಾದ್ ಮತ್ತು ಪುಣೆ ಜಿಲ್ಲೆಗಳಲ್ಲಿ ಆಮ್ಲಜನಕ ಪೂರೈಕೆ ಸಮಸ್ಯೆಯಾಗಿದೆ. ಸತಾರಾ ಲಾತೂರ್ ಜಿಲ್ಲೆಗಳಲ್ಲಿ ವೆಂಟಿಲೇಟರ್ ಗಳ ಕಾರ್ಯನಿರ್ವಹಣೆ ಸಮಸ್ಯೆ ಇದೆ. ಪ್ರತಿ ಜಿಲ್ಲೆಯಲ್ಲಿ ನಿಯಮ ಪಾಲನೆ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಕೇಂದ್ರ ತಂಡ ತನ್ನ ವರದಿಯಲ್ಲಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries