ನವದೆಹಲಿ: 'ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಕೋಟಿಕ್ಕಿಂತ ಹೆಚ್ಚು ಲಸಿಕೆಯ ಡೋಸ್‌ಗಳು ಲಭ್ಯವಿದೆ. ಜತೆಗೆ ಮೂರು ದಿನಗಳೊಳಗೆ ಹೆಚ್ಚುವರಿಯಾಗಿ 20 ಲಕ್ಷಗಳಷ್ಟು ಡೋಸ್‌ಗಳನ್ನು ರಾಜ್ಯಗಳಿಗೆ ನೀಡಲಾಗುವುದು' ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ.
ಭಾರತ ಸರ್ಕಾರವು ಈವರೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಯ 16.33 ಕೋಟಿ (16,33,85,030) ಡೋಸ್‌ಗಳನ್ನು ಉಚಿತವಾಗಿ ನೀಡಿದೆ.
'ಸದ್ಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಲಸಿಕೆಯ 1,00,28,527 ಡೋಸ್‌ಗಳು ಲಭ್ಯವಿದೆ. ಸುಮಾರು 20 ಲಕ್ಷ (19,81,110) ಡೋಸ್‌ಗಳನ್ನು ಮೂರು ದಿನಗಳೊಳಗೆ ಅವರಿಗೆ ನೀಡಲಾಗುವುದು' ಎಂದು ಸಚಿವಾಲಯ ತಿಳಿಸಿದೆ.