ಕಾಸರಗೋಡು : ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ನಿಯಂತ್ರಣ ಚಟುವಟಿಕೆಗಳ ಅಂಗವಾಗಿ ಆರಂಭಿಸಲಾದ ಮೆಗಾ ಟೆಸ್ಟಿಂಗ್ ಡ್ರೈವ್ ನಲ್ಲಿ ಕಳೆದ 2 ದಿನಗಳಿಂದ(ಶುಕ್ರವಾರ, ಶನಿವಾರ) 8321 ಮಂದಿ ಕೋವಿಡ್ ತಪಾಸಣೆಗೆ ಒಳಗಾದರು.
ಇವರಲ್ಲಿ 4235 ಮಂದಿ ಆರ್.ಟಿ.ಪಿ.ಸಿ.ಆರ್. ತಪಾಸಣೆಗೆ, 4034 ಮಂದಿ ಆಂಟಿಜೆನ್ ತಪಾಸಣೆಗೆ ಒಳಗಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಸರಕಾರಿ ಆರೋಗ್ಯ ಕೇಂದ್ರಗಳು, ಖಾಸಗಿ ಪ್ರಯೋಗಾಲಯಗಳು, ಮಡಕ್ಕರ, ಅಳಿಕ್ಕರೆ ಹಾರ್ಬರ್ ಗಳು, ಪಡನ್ನಕ್ಕಾಡು ಇ.ಎಂ.ಎಸ್. ಕ್ಲಬ್ ಎಂಬೆಡೆಗಳಲ್ಲಿ ಕೋವಿಡ್ 19 ತಪಾಸಣೆ ನಡೆಸಲಾಗಿದೆ.
ಕೋವಿಡ್ ರೋಗ ಲಕ್ಷಣ ಹೊಮದಿರುವವರು, ಕೋವಿಡ್ ಬಧಿತರ ಸಂಪರ್ಕದಲ್ಲಿದ್ದವರು, ಸಾರ್ವಜನಿಕ ಸಂಪರ್ಕ ಸತತವಾಗಿ ಇರುವವ 45 ವರ್ಷಕ್ಕಿಂತ ಕೆಳಗಿನ ವಯೋಮಾನ ಆಟೋ-ಟಾಕ್ಸಿ ಚಾಲಕರು, ಕಲೆಕ್ಷನ್ ಏಜೆಂಡರು, ಕೋವಿಡ್ ವಾಕ್ಸಿನೇಷನ್ ಪಡೆಯದೇ ಇಒರುವ 45 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಮಂದಿ, ಚುನಾವಣೆಯ ಪ್ರಚಾರ ಪ್ರಕ್ರಿಯೆಯಯಲ್ಲಿ ತೊಡಗಿದ್ದವರು ಮೊದಲಾದವರಿಗೆ ಕೋವಿಡ್ ತಪಾಸಣೆಯಲ್ಲಿ ಆದ್ಯತೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಕಟ್ಟುನಿಟ್ಟುಗಳನ್ನು ಬಿಗಿಗೊಳಿಸಲಿದ್ದು, ಹೆಚ್ಚುವರಿ ಮಂದಿಯನ್ನು ತಪಾಸಣೆಗೊಳಪಡಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ನುಡಿದರು.