ಕೊಚ್ಚಿ: ರಾಜ್ಯದಲ್ಲಿ ಇನ್ನು ವಾಹನಗಳಿಗೆ ಹೊಗೆ ಪರೀಕ್ಷಾ ಪ್ರಮಾಣಪತ್ರವಿಲ್ಲದಿದ್ದರೆ 2,000 ರೂ.ಗಳ ದಂಡ ವಿಧಿಸಲಾಗುತ್ತದೆ. ಪುನರಾವರ್ತಿತವಾದರೆ 10,000 ರೂ.ಗಳ ದಂಡ ವಿಧಿಸಲಾಗುತ್ತದೆ. ಮೋಟಾರು ವಾಹನ ಇಲಾಖೆಯ ಈ ಕ್ರಮವು ವಾಹನಗಳಿಂದ ವಾಯುಮಾಲಿನ್ಯವನ್ನು ತಡೆಗಟ್ಟುವ ಹಸಿರು ಜಾಗೃತಿ ಅಭಿಯಾನದ ಭಾಗವಾಗಿದೆ. ಪ್ರಸ್ತುತ ಹೊಗೆ ಪರಿಶೋಧನಾ ಪ್ರಮಾಣಪತ್ರವಿಲ್ಲದವರಿಗೆ ಮುಂದಿನ ಏಳು ದಿನಗಳೊಳಗೆ ಹೊಗೆ ಪರೀಕ್ಷಾ ಪ್ರಮಾಣಪತ್ರವನ್ನು ಹಾಜರುಪಡಿಸುವಂತೆ ಕೇಳಿಕೊಳ್ಳಲಾಗಿದೆ.
ಆದರೆ, ವಿನಾಯಿತಿ ಲಭ್ಯವಿರುವುದಿಲ್ಲ ಎಂದು ಮೋಟಾರು ವಾಹನ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ ಎಂಬ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಟ್ರಿಬ್ಯುನಲ್)ವು ಸರ್ಕಾರಕ್ಕೆ ನೀಡಿರುವ ನಿರ್ದೇಶನವನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಹೊಗೆ ಪರೀಕ್ಷೆ ಇ-ಪ್ರಮಾಣಪತ್ರಗಳನ್ನು ಈ ಹಿಂದೆ ಮೋಟಾರು ವಾಹನ ಇಲಾಖೆ ಕಡ್ಡಾಯಗೊಳಿಸಿತ್ತು. ವಾಹನ ಹೊಗೆ ಪರೀಕ್ಷೆಯ ಮಾಹಿತಿಯನ್ನು ಮೋಟಾರು ವಾಹನ ಇಲಾಖೆಗೆ ಆನ್‍ಲೈನ್‍ನಲ್ಲಿ ಲಭ್ಯವಾಗುವಂತೆ ಇದು ನೆರವಾಗುತ್ತದೆ.