ನವದೆಹಲಿ: ವಿಶ್ವ ಹವಾಮಾನ ಸಂಸ್ಥೆಯ ನೂತನ ವರದಿಯೊಂದರ ಪ್ರಕಾರ, ಲಾ ನಿನಾ ಚಂಡಮಾರುತದ ಹೊರತಾಗಿಯೂ ಜಾಗತಿಕ ಸರಾಸರಿ ತಾಪಮಾನ ಪ್ರಿ- ಇಂಡಸ್ಟ್ರಿಯಲ್ (1850-1900) ಮಟ್ಟಕ್ಕಿಂತಲೂ ಸುಮಾರು 1.2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದ್ದು, ಅತ್ಯಧಿಕ ತಾಪಮಾನ ದಾಖಲಾದ ಮೂರು ವರ್ಷಗಳಲ್ಲಿ 2020 ಕೂಡಾ ಒಂದಾಗಿದೆ.
ಕೋವಿಡ್-19 ನೊಂದಿಗೆ ತೀವ್ರ ಉಷ್ಣತೆಯ ತಾಪಮಾನ ಸೇರಿಕೊಂಡು 2020ರಲ್ಲಿ ಮಿಲಿಯನ್ ಜನರು ದುಪ್ಪಟ್ಟು ತೊಂದರೆ ಅನುಭವಿಸುವಂತಾಯಿತು. ಆರು ವರ್ಷಗಳ ಹಿಂದೆ 2015, ಅತ್ಯಧಿಕ ತಾಪಮಾನದ ವರ್ಷವಾಗಿ ದಾಖಲಾಗಿತ್ತು. 2011-2020 ಬಿಸಿಲಿನ ದಶಕವಾಗಿ ದಾಖಲಾಗಿದೆ.
28 ವರ್ಷಗಳ ಹಿಂದೆ 1993ರಲ್ಲಿ ಸಂಭಾವ್ಯ ಹವಾಮಾನ ವೈಫರೀತ್ಯಕ್ಕೆ ಕಳವಳ ವ್ಯಕ್ತಪಡಿಸಿ ಮೊದಲ ಬಾರಿಗೆ ಹವಾಮಾನ ಕುರಿತು ವರದಿಯನ್ನು ವಿಶ್ವ ಹವಾಮಾನ ಇಲಾಖೆ ನೀಡಿತ್ತು. 28 ವರ್ಷ ಆದ ನಂತರವೂ, ಸಮುದ್ರ ಮಟ್ಟದಲ್ಲಿ ಏರಿಕೆ, ಭೂ ಹಾಗೂ ಸಮುದ್ರದ ತಾಪಮಾನದಲ್ಲಿ ತೀವ್ರ ತರವಾದ ಹೆಚ್ಚಳವಾಗುತ್ತಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಕಾರ್ಯದರ್ಶಿ- ಜನರಲ್ ಪ್ರೊಫೆಸರ್ ಪೆಟ್ಟೇರಿ ತಾಲಾಸ್ ತಿಳಿಸಿದ್ದಾರೆ.
2020ರ ಜಾಗತಿಕ ಹವಾಮಾನ ವರದಿಯಲ್ಲಿ ಭೂ, ಸಮುದ್ರದ ತಾಪಮಾನದಲ್ಲಿ ಹೆಚ್ಚಳ, ಸಮುದ್ರದ ಮಟ್ಟದಲ್ಲಿ ಏರಿಕೆ. ಹಿಮಪಾತ, ಹಿಮನದಿ ಸ್ಪೋಟ ಒಳಗೊಂಡಂತೆ ಹವಮಾನ ವ್ಯವಸ್ಥೆಯ ಅಂಶಗಳನ್ನು ನೀಡಲಾಗಿದೆ. ಅಲ್ಲದೇ, ಸಾಮಾಜಿಕ ಆರ್ಥಿಕ ಅಭಿವೃದ್ಧಿ, ವಲಸೆ ಮತ್ತು ನಿರುದ್ಯೋಗ, ಆಹಾರ ಭದ್ರತೆ, ಭೂ ಮತ್ತು ಸಮುದ್ರ ಪರಿಸರ ವ್ಯವಸ್ಥೆ ಮೇಲಾಗುವ ಪರಿಣಾಮಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಅಮೆರಿಕ ಏಪ್ರಿಲ್ 22 ಮತ್ತು 23 ರಂದು ಆಯೋಜಿಸಿರುವ ಹಮಾಮಾನ ಕುರಿತ ನಾಯಕರ ವರ್ಚುಯಲ್ ಶೃಂಗಸಭೆ ಹಿನ್ನೆಲೆಯಲ್ಲಿ ಈ ವರದಿ ಬಿಡುಗಡೆಯಾಗಿದೆ. ದೊಡ್ಡ ರಾಷ್ಟ್ರಗಳು ಗ್ರೀನ್ ಹೌಸ್ ಎಫೆಕ್ಟ್ ಕಡಿಮೆ ಮಾಡಬೇಕು ಹಾಗೂ ಈ ಶತಮಾನದೊಳಗೆ ಭೂಮಿಯ ತಾಪಮಾನ ಎರಡು ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು ಏರಿಕೆ ಆಗಲು ಬಿಡಬಾರದು. ತಾಪಮಾನದ ಏರಿಕೆಯನ್ನು ಒಂದೂವರೆ ಡಿಗ್ರಿಗಷ್ಟೇ ಸೀಮಿತಗೊಳಿಸಲು ಪ್ರಯತ್ನಿಸಬೇಕು ಎಂದು ಅಮೆರಿಕ ಅಧ್ಯಕ್ಷ ಜೋ -ಬೈಡೆನ್ ಕೋರಿದ್ದಾರೆ.
ವ್ಯರ್ಥ ಮಾಡಲು ಸಮಯ ಇಲ್ಲ ಎಂಬುದನ್ನು ಈ ವರದಿ ತೋರಿಸುತ್ತಿದೆ. ಹವಾಮಾನ ವೈಫರೀತ್ಯ ಹಾಗೂ ಪರಿಣಾಮದಿಂದಾಗಿ ಜನರು ಈಗಾಗಲೇ ಬೆಲೆ ತೆತ್ತಿದ್ದಾರೆ. ಇದು ಕ್ರಿಯೆಯ ವರ್ಷವಾಗಿದೆ. 2050ರೊಳಗೆ 2050 ರ ವೇಳೆಗೆ ದೇಶಗಳು ನಿವ್ವಳ ಶೂನ್ಯ ಹೊರಸೂಸುವಿಕೆಗೆ ಬದ್ಧರಾಗಿರಬೇಕು ಎಂದು ವಿಶ್ವ ಸಂಸ್ಥೆ ಸೆಕ್ರೆಟರಿ ಜನರಲ್ ಹೇಳಿದ್ದಾರೆ.