ಕಾಸರಗೋಡು : ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 2020 ಡಿಸೆಂಬರ್ ತಿಂಗಳಲ್ಲಿ ಕೆ.ಟೆಟ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿರುವ ಅಭ್ಯರ್ಥಿಗಳ ಸರ್ಟೀಪಿಕೆಟ್ ತಪಾಸಣೆ ಕೋವಿಡ್ ಕಟ್ಟುನಿಟ್ಟು ಪಾಲನೆಯೊಂದಿಗೆ ಏ.22,23,24,26ರಂದು ನಡೆಯಲಿದೆ.
ಏ.22ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಕ್ಯಾಗರಿ-1, ಮಧ್ಯಾಹ್ನ 1.30ರಿಂದ ಸಂಜೆ 4.30 ವರೆಗೆ ಕ್ಯಾಟಗರಿ-4, ಏ.23ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಕ್ಯಾಗರಿ-2(ನೋಂದಣಿ ನಂಬ್ರ 200001-200199), ಮಧ್ಯಾಹ್ನ 1.30ರಿಂದ ಸಂಜೆ 4.30 ವರೆಗೆ ಕ್ಯಾಟಗರಿ-2(200202-200419), ಏ.24ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಕ್ಯಾಗರಿ-3(ನೋಂದಣಿ ನಂಬ್ರ 300013-300452), ಮಧ್ಯಾಹ್ನ 1.30ರಿಂದ ಸಂಜೆ 4.30 ವರೆಗೆ ಕ್ಯಾಟಗರಿ-3(ನೋಂದಣಿ ನಂಬ್ರ 300453-300828) ಎಂಬ ಕ್ರಮದಲ್ಲಿ ಸರ್ಟಿಫಿಕೆಟ್ ಗಳ ತಪಾಸಣೆ ನಡೆಯಲಿದೆ. ಉಳಿದ ಎಲ್ಲ ಸರ್ಟಿಫಿಕೆಟ್ ಗಳ ತಪಾಸಣೆ ಏ.26ರಂದು ನಡೆಯಲಿದೆ. ಅರ್ಹರು ಅಸಲಿ ಸರ್ಟಿಫಿಕೆಟ್ , ಮಾರ್ಕ್ ಲಿಸ್ಟ್, ಹಾಲ್ ಟಿಕೆಟ್, ಜಾತಿ ಸರ್ಟಿಫೀಕೆಟ್ ಇತ್ಯಾದಿಗಳ ನಕಲುಗಳ ಸಹಿತ ಕಾಸರಗೋಡು ಜಿಲ್ಲಾ ಶಿಕ್ಷಣ ಕಚೇರಿಯಲ್ಲಿ ಹಾಜರಾಗುವಂತೆ ಡಿ.ಇ.ಒ. ತಿಳಿಸಿರುವರು.