ತಿರುವನಂತಪುರ: ಕೋವಿಡ್ ಲಸಿಕೆಗಳ ಕ್ಷಾಮವಿದೆ ಎಂಬ ಕೂಗಿನ ಮಧ್ಯೆ ಹೆಚ್ಚಿನ ಲಸಿಕೆಗಳು ಕೇರಳಕ್ಕೆ ನಿನ್ನೆ ತಲುಪಿವೆ. 2,20,000 ಡೋಸ್ ಲಸಿಕೆಗಳು ಮಂಗಳವಾರ ರಾಜ್ಯಕ್ಕೆ ಬಂದಿವೆ. ಸೀರಮ್ ಇನ್ಸ್ಟಿಟ್ಯೂಟ್ ತಯಾರಿಸಿದ ಕೋವ್ಶೀಲ್ಡ್ ಲಸಿಕೆ ಇದೀಗ ಬಂದು ತಲಪಿದೆ.
ತಿರುವನಂತಪುರಕ್ಕೆ ತಲುಪಿಸುವ ಲಸಿಕೆಯನ್ನು ಇತರ ಜಿಲ್ಲೆಗಳಿಗೆ ವಿತರಿಸಲಾಗುವುದು. ಪ್ರಸ್ತುತ ಕೇರಳದಲ್ಲಿ 3,68,840 ಡೋಸ್ ಲಸಿಕೆ ಇದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಲಸಿಕೆಗಳ ಹೆಚ್ಚಿನ ದಾಸ್ತಾನು ಬೇಕು ಎಂದು ಸಿಎಂ ಬೇಡಿಕೆ ಇರಿಸಿದ್ದರು. ಈ ಹಿಂದೆ ಮುಖ್ಯಮಂತ್ರಿ 50 ಲಕ್ಷ ಡೋಸ್ ಲಸಿಕೆಗಳನ್ನು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಕಳುಹಿಸಿದ್ದರು.